ನವದೆಹಲಿ: ಜನವರಿ 22ರಂದು ರಾಮಮಂದಿರದ ಶಂಕುಸ್ಥಾಪನೆಗೆ ಒಂದು ವಾರ ಮೊದಲು ದೇಶದಾದ್ಯಂತ ಎಲ್ಲಾ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಜನವರಿ 14 ರಿಂದ ದೇಶದ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತೆ ಅಭಿಯಾನ ನಡೆಸಬೇಕು ಎಂದಿದ್ದಾರೆ. ಅಯೋಧ್ಯೆ ನಗರವನ್ನು ಭಾರತದ ಸ್ವಚ್ಛ ನಗರವನ್ನಾಗಿ ಮಾಡಲು ಜನರು ಸಂಕಲ್ಪ ಮಾಡಬೇಕು. ಈ ಸ್ವಚ್ಛ ಅಯೋಧ್ಯೆ ಇಲ್ಲಿನ ಜನರ ಜವಾಬ್ದಾರಿ. ಇದಕ್ಕಾಗಿ ನಾವು ಒಟ್ಟಾಗಿ ಪ್ರತಿ ಹೆಜ್ಜೆ ಇಡಬೇಕು. ಇಂದು ನಾನು ದೇಶದ ಎಲ್ಲಾ ಯಾತ್ರಾ ಸ್ಥಳಗಳು ಮತ್ತು ದೇವಾಲಯಗಳಿಗೆ ಹೇಳಲು ಬಯಸುತ್ತೇನೆ. ರಾಮಮಂದಿರ ಉದ್ಘಾಟನೆಗೆ ಒಂದು ವಾರ ಮೊದಲು, ಜನವರಿ 14 ರಿಂದ (ಮಕರ ಸಂಕ್ರಾಂತಿ) ಇಡೀ ದೇಶದ ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತೆಯ ದೊಡ್ಡ ಅಭಿಯಾನವನ್ನು ನಡೆಸಬೇಕು ಎಂದು ತಿಳಿಸಿದ್ದಾರೆ.
ಈ ಅಭಿಯಾನವನ್ನು ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿ ದೇವಸ್ಥಾನಗಳಲ್ಲಿ ನಡೆಸಬೇಕು ಎಂದು ಮೋದಿ ತಿಳಿಸಿದ್ದಾರೆ.