Slide
Slide
Slide
previous arrow
next arrow

ಜ.3ಕ್ಕೆ ಜೋಯಿಡಾದಲ್ಲಿ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ

300x250 AD

ಜೋಯಿಡಾ : ಪ್ರತಿವರ್ಷದಂತೆ ಈ ವರ್ಷವೂ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಶಿವಾಜಿ ವೃತದ ಹತ್ತಿರ ಭಕ್ತಾಭಿಮಾನಿಗಳ ಸರ್ವ ಸಹಕಾರದಲ್ಲಿ 29ನೇ ವರ್ಷದ ಶ್ರೀ.ಅಯ್ಯಪ್ಪ ಸ್ವಾಮಿಯ ಪೂಜೋತ್ಸವ ಕಾರ್ಯಕ್ರಮವು ಇದೇ ಬರುವ ಜನವರಿ 3 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಗುರುಸ್ವಾಮಿ ಸಿದ್ದು ಜೋಕೇರಿಯವರು ತಿಳಿಸಿದ್ದಾರೆ.

ಅವರು ಭಾನುವಾರ ಜೋಯಿಡಾ ತಾಲೂಕು ಕೇಂದ್ರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಜನವರಿ 3 ರಂದು ಪಡಿಪೂಜೆ, ಮಹಾಪೂಜೆ ಮತ್ತು ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ.ಅಯ್ಯಪ್ಪನ ಕೃಪೆಗೆ ಪಾತ್ರರಾಗಬೇಕಾಗಿ ಸಿದ್ದು ಜೋಕೇರಿಯವರು ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top