Slide
Slide
Slide
previous arrow
next arrow

ದೇಶಪಾಂಡೆಯವರಿಗೆ ಇನ್ನೂ ಹೆಚ್ಚಿನ ಸ್ಥಾನಮಾನ ಸಿಗಲಿ: ಉಸ್ಮಾನ್ ಮುನ್ನಾ ವಹಾಬ್

300x250 AD

ದಾಂಡೇಲಿ : ರಾಜ್ಯದ ಅತಿ ಹಿರಿಯ ಶಾಸಕರು, ಆರು ಬಾರಿ ಸಚಿವರಾಗಿ ರಾಜ್ಯಕ್ಕೆ ಗಣನೀಯ ಸೇವೆಯನ್ನು ನೀಡಿದ ಹೆಗ್ಗಳಿಕೆಯನ್ನು ಹೊಂದಿರುವ ಆರ್.ವಿ.ದೇಶಪಾಂಡೆಯವರನ್ನು ಕರ್ನಾಟಕ ಸರಕಾರ ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂತಸದ ವಿಚಾರ. ದೇಶಪಾಂಡೆ ಅವರಿಗೆ ಅವರ ಅನುಭವ ಹಾಗೂ ಮುತ್ಸದ್ದಿತನಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ಸಿಗುವಂತಾಗಲೆಂದು ದಾಂಡೇಲಿ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನಾ ವಹಾಬ್ ತಿಳಿಸಿದ್ದಾರೆ.

ರಾಜ್ಯದ ಕೈಗಾರಿಕಾ ಕ್ಷೇತ್ರದ ಪ್ರಗತಿಗೆ ಆರ್.ವಿ.ದೇಶಪಾಂಡೆ ಕೊಡುಗೆ ಅಪಾರ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದೇಶಪಾಂಡೆಯವರ ದೂರದೃಷ್ಟಿ ಯೋಚನೆ, ಯೋಜನೆಗಳು ಅನುಷ್ಠಾನಗೊಂಡು ಕ್ಷೇತ್ರ ಪ್ರಗತಿಯಡೆಗೆ ಸಾಗುತ್ತಿದೆ. ಜನಪರ ಕಾಳಜಿಯ ಜನಪ್ರಿಯ ನಾಯಕರಾದ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗ ರಾಜ್ಯದ ಅಭಿವೃದ್ಧಿಗೆ ಪ್ರೇರಣಾದಾಯಿಯಾಗಲೆಂದು ಉಸ್ಮಾನ್ ಮುನ್ನಾ ವಹಾಬ್ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top