Slide
Slide
Slide
previous arrow
next arrow

ಗಡಿಯಲ್ಲೊಂದು ಕಲಿಕಾ ಹಬ್ಬ: ಡಿಗ್ಗಿ ಶಾಲೆಯ ಸುವರ್ಣ ಮಹೋತ್ಸವ ಯಶಸ್ವಿ

300x250 AD

ಜೋಯಿಡಾ : ತಾಲ್ಲೂಕಿನ ಡಿಗ್ಗಿಯಲ್ಲಿ ಗಡಿಯಲ್ಲೊಂದು ಕಲಿಕಾ ಹಬ್ಬ ಮತ್ತು ಡಿಗ್ಗಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವು ಶನಿವಾರ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್ ಪ್ರಾಚಾರ್ಯರಾದ ಎಂ. ಎಸ್. ಹೆಗಡೆಯವರು ಮಾತಾಡುತ್ತಾ ಜೋಯಿಡಾದಲ್ಲಿ ಕ್ರಿಯಾಶೀಲತೆಯೂ ಇದೆ. ಸೃಜನಾತ್ಮಕ ಧೋರಣೆಯೂ ಇದೆ. ಶಿಕ್ಷಣ ಇಲಾಖೆಯಲ್ಲಿ ಇಂತಹ ದುರ್ಗಮ ಸ್ಥಳದಲ್ಲಿ ಮಕ್ಕಳಿಗಾಗಿ ಇಲಾಖೆಯ ಯಾವುದೇ ಅನುದಾನವನ್ನು ಬಯಸದೇ ಸಾರ್ವಜನಿಕರ ಸಹಕಾರ ಮತ್ತು ಶಿಕ್ಷಕರ ಇಚ್ಚಾಶಕ್ತಿಯಿಂದ ಕಲಿಕಾ ಹಬ್ಬ ನೆರವೇರಿಸಿದ್ದು ಅನುಕರಣಿಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ ಶೇಖ, ಸಮಾನ್ವಯಾಧಿಕಾರಿ ಸುರೇಶ ಗಾಂವಕರ, ಕುಣಬಿ ಸಮುದಾಯದ ಮುಖಂಡ ಅಜಿತ್ ಮಿರಾಶಿ ಸಂದರ್ಭೋಚಿತವಾಗಿ ಮಾತಾಡಿದರು. ಬಜಾರ್ ಕುಣಂಗ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನೀತಾ ಹರಿಜನ ಅಧ್ಯಕ್ಷತೆ ವಹಿಸಿದ್ದರು.

300x250 AD

ವೇದಿಕೆಯಲ್ಲಿ ಗ್ರಾಮ ಪಂಚಾಯ್ತ ಉಪಾಧ್ಯಕ್ಷ ಸದಾನಂದ ಸಾವಂತ್, ಯಂಗ್ ಸ್ಟಾರ್ ಕ್ಲಬ್ ಅಧ್ಯಕ್ಷ ಪ್ರದೀಪ್ ವೇಲಿಪ್, ಪ್ರಮುಖರಾದ ಗಣಪತಿ ಗಾವಾಡ, ಶಿಕ್ಷಣ ಸಂಯೋಜಕ ಪರಮೇಶ್ವರ್ ಹರಿಕಂತ್ರ, ಬಿ.ಆರ್.ಪಿ ಶಶಿಕಾಂತ ಹೂಲಿ, ಶಿಕ್ಷಕ ಸಂಘದ ಶಶಿಕಾಂತ ಕಾಂಬಳೆ ಮತ್ತು ಜನಾರ್ಧನ ಹೆಗಡೆ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಮೋರೆ ವಂದಿಸಿದರು. ಸಿ ಆರ್ ಪಿ ಭಾಸ್ಕರ್ ಗಾಂವಕರ ನಿರೂಪಿಸಿದರು.

Share This
300x250 AD
300x250 AD
300x250 AD
Back to top