Slide
Slide
Slide
previous arrow
next arrow

ವಿಶ್ವ ಕನ್ನಡ ಹಬ್ಬದ ಪೋಸ್ಟರ್ ಬಿಡುಗಡೆ: ಕಲಾವಿದರನ್ನು ಅಭಿನಂದಿಸಿದ ಉಸ್ತುವಾರಿ ಸಚಿವ ವೈದ್ಯ

300x250 AD

ಶಿರಸಿ: ನಗರದ ಕೆಡಿಸಿಸಿ ಬ್ಯಾಂಕ್ ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾಂಕಾಳು ವೈದ್ಯ ಸಿಂಗಪೂರ್ ವಿಶ್ವಕನ್ನಡ ಹಬ್ಬಕ್ಕೆ ಜಿಲ್ಲೆಯಿಂದ ಆಯ್ಕೆಗೊಂಡ ಕಲಾವಿದರಾದ ಶಿರಸಿ ರತ್ನಾಕರ್ ಹಾಗೂ ದಿವ್ಯಾ ಶೇಟ್ ಇವರನ್ನು ಅಭಿನಂದಿಸಿ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ವಿಶ್ವ ಕನ್ನಡ ಹಬ್ಬದ ಭಿತ್ತಿಚಿತ್ರವನ್ನು ಅನಾವರಣಗೊಳಿಸಿ ನನ್ನ ಜಿಲ್ಲೆಯ ಗಾಯಕರು ಪ್ರಥಮ ಬಾರಿಗೆ ಸಾಗರದಾಚೆ ಕಾರ್ಯಕ್ರಮ ನೀಡುತ್ತಿರುವುದು ಹೆಮ್ಮೆ ಹಾಗೂ ಖುಷಿ ಸಂಗತಿಯಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಜನತೆಯ ಪರವಾಗಿ ರತ್ನಾಕರ ಹಾಗೂ ದಿವ್ಯಾರನ್ನು ಅಭಿನಂದಿಸುತ್ತೇನೆ. ಜೊತೆಗೆ ಆಯ್ಕೆ ಸಮಿತಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಹಾಗೂ ಡಾ. ಕಿಕ್ಕೇರಿಯವರಿಗೆ ಜಿಲ್ಲೆಯ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ , ಕೆಡಿಸಿಸಿ ಉಪಾಧ್ಯಕ್ಷ ಮೋಹನ್ ದಾಸ್ ಹಾಗೂ ಉ.ಕ ಜಿಲ್ಲಾ ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿ ಸಂಸ್ಥೆಯ ವಿಶ್ವನಾಥ್ ಗೌಡ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top