Slide
Slide
Slide
previous arrow
next arrow

ಲಯನ್ಸ್ ಶಾಲೆ ಯುತ್ ಫೆಸ್ಟಿವಲ್: ಜನಮನ ರಂಜಿಸಿದ ‘ಮಾರುತಿ ಪ್ರತಾಪ’

300x250 AD

ಶಿರಸಿ: ನಗರದ ಲಯನ್ಸ್ ಎಜ್ಯುಕೇಶನ್ ಸಂಸ್ಥೆಯ ಮೈದಾನದಲ್ಲಿ ಢಾ,ಭಾಸ್ಕರ ಸ್ವಾದಿ ಮೆಮೊರಿಯಲ್ ಲಯನ್ಸ್ ಪಿ.ಯು. ಕಾಲೇಜು ಕಟ್ಟಡ ಸಹಾಯಾರ್ಥ ಸಂಘಟಿಸಲಾಗಿದ್ದ ಪೌರಾಣಿಕ ಪ್ರಸಂಗ ಕಿಕ್ಕಿರಿದ ಅಭಿಮಾನಿಗಳ ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ಲಯನ್ ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಬಿ. ಎಸ್. ರಾಜಶೇಖರಯ್ಯ ಜ್ಯೋತಿ ಬೆಳಗುವ ಮೂಲಕ ಯಕ್ಷಗಾನಕ್ಕೆ ಚಾಲನೆ ನಿಡಿದರು. ವೇದಿಕೆಯಲ್ಲಿ ಲಯನ್. ಅಶೋಕ ಹೆಗಡೆ, ಲ. ಪ್ರಭಾಕರ ಹೆಗಡೆ, ಲ. ಕೆ. ಬಿ. ಲೋಕೇಶ ಹೆಗಡೆ, ಲ. ಜ್ಯೋತಿ ಹೆಗಡೆ ಸೇರಿದಂತೆ ಲಯನ್ಸ ಜಿಲ್ಲಾ ಪ್ರಮುಖರು ಹಾಗೂ ಶಿರಸಿ ಲಯನ್ಸ ಕ್ಲಬ್‌ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

300x250 AD

ಯಾವುದೇ ಸಭಾಕಾರ್ಯಕ್ರಮವಿಲ್ಲದೇ ನೇರವಾಗಿ ಯಕ್ಷಗಾನ ಮಾರುತಿ ಪ್ರತಾಪ ಆರಂಭಗೊಂಡು, ಹಿಮ್ಮೇಳದಲ್ಲಿ ದ್ವಂದ್ವ ಭಾಗವತಿಕೆಯಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರ್‌ರವರು ಸೊಗಸಾಗಿ ಹಾಡಿದರೆ, ಮದ್ದಲೆಯಲ್ಲಿ ಅನಿರುದ್ಧ ವರ್ಗಾಸರ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್, ಸಹಕರಿಸಿದರು. ಮುಮ್ಮೆಳದ ಪಾತ್ರದಾರಿಗಳಾಗಿ ಯಕ್ಷ ರಂಗದ ರಾಜ ಎಂದೇ ಕರೆಯಲ್ಟಡುವ ಬಳಕೂರ ಕೃಷ್ಣಯಾಜಿ ಬಲರಾಮನಾಗಿ, ಹನುಮಂತನಾಗಿ ಗಣಪತಿ ನಾಯ್ಕ ಕುಮಟಾ, ಕೃಷ್ಣನಾಗಿ ಉದಯ ಕಡಬಾಳ, ಸತ್ಯಭಾಮೆಯಾಗಿ ಸುಬ್ರಹ್ಮಣ್ಯ ಯಲಗುಪ್ಪಾ ಮಕರಂದ, ದೂತನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ನಾರದನಾಗಿ ಮೂರೂರು ನಾಗೇಂದ್ರ ಹಾಗೂ ರುಕ್ಮಿಣಿಯಾಗಿ ದೀಪಕ ಕುಂಕಿ ಮನೋಜ್ಞವಾಗಿ ಅಭಿನಯಿಸಿ ಯಕ್ಷಾಭಿಮಾನಿಗಳಿಗೆ ರಸದೂಟ ಬಡಿಸಿದರು.
ಆರಂಭಿಕವಾಗಿ ಹಿಲ್ಲೂರ್ ಭಾಗವತರ ಭಾಗವತಿಕೆಯೊಂದಿಗೆ, ಶಿರಸಿ ಲಯನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾದ ಪ್ರಭಾಕರ ಹೆಗಡೆ, ಪ್ರತಿಭಾ ಹೆಗಡೆ ದಂಪತಿಗಳು ಲಯನ್ಸ ಶಾಲಾ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಪ್ರಾಚಾರ್ಯರಾದ ಶಶಾಂಕ ಹೆಗಡೆ ಹಾಗೂ ಶಿಕ್ಷಕವೃಂದ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top