Slide
Slide
Slide
previous arrow
next arrow

ಮಕ್ಕಳಿಗೆ ಯಕ್ಷಗಾನ ಕಲಾಪ್ರಕಾರಗಳ ಮಾರ್ಗದರ್ಶನ ಮಾಡುವುದು ಒಳ್ಳೆಯ ಸಂಸ್ಕಾರ: ಅನಂತಮೂರ್ತಿ ಹೆಗಡೆ

300x250 AD

ಶಿರಸಿ: ಪುಟ್ಟ ಪುಟ್ಟ ಮಕ್ಕಳಿಗೆ ನವರಸ ಕಲೆ ಯಕ್ಷಗಾನ ಹಾಗೂ ಇತರ ಕಲಾ ಪ್ರಕಾರಗಳನ್ನು ಸಣ್ಣ ವಯಸ್ಸಿನಿಂದಲೇ ಮಾರ್ಗರ್ಶನ ಮಾಡುವುದು ಅತ್ಯಂತ ಶ್ಲಾಘನೀಯವಾಗಿದೆ. ಇದೊಂದು ಸಂಸ್ಕಾರ ನೀಡುವ ಒಳ್ಳೆಯ ವ್ಯವಸ್ಥೆಯಾಗಿದ್ದು, ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಿಸಲು ಸದಾವಕಾಶ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಹೇಳಿದರು.

ನಗರದ ಸಾಮ್ರಾಟ ಎದುರಿನ ನೆಮ್ಮದಿ ಆವರಣದ ರಂಗಧಾಮದಲ್ಲಿ ನಾದಾವಧಾನ ಪ್ರತಿಷ್ಠಾನ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಯಕ್ಷ-ಗಾನ-ಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅತಿಥಿಗಳಾದ ಗಿರಿಧರ ಕಬ್ನಳ್ಳಿ ಮಾತನಾಡಿ, ಮಕ್ಕಳಲ್ಲಿಯ ಪ್ರತಿಭೆ ಹಾಗೂ ಆಸಕ್ತಿ ಗುರುತಿಸಿ ಒಳ್ಳೆಯ ಮಾರ್ಗದರ್ಶನ, ಅವಕಾಶ ಮಾಡಿಕೊಡುವ ಮಹತ್ತರ ಜವಾಬ್ದಾರಿ ಪಾಲಕರ ಹಾಗೂ ಕಲಿಸುವ ಗುರುಗಳದ್ದಿದೆ ಎಂದರು. ತಾಳಮದ್ದಲೆ ಸಂಘಟಕ ಚಂದು ಸೀತಾರಾಮ, ನಾಗರಾಜ ಜೋಷಿ ಮಾತನಾಡಿದರು. ವೇದಿಕೆಯಲ್ಲೊ ವಿ.ಪಿ.ಹೆಗಡೆ ವೈಶಾಲಿ, ಮದ್ದಲೆ ವಾದಕ ಎ.ಪಿ.ಪಾಠಕ್, ಇಂದಿರಾ ಹೆಗಡೆ ಉಪಸ್ಥಿತರಿದ್ದರು.

300x250 AD

ನಾದಾವಧಾನದ ಎನ್.ಜಿ‌.ಹೆಗಡೆ ಯಲ್ಲಾಪುರ ಎಲ್ಲರನ್ನೂ ಗೌರವಿಸಿದರೆ, ಯಕ್ಷಗಾನ ವಿದ್ವಾಂಸ ಅಜಿತ್ ಕಾರಂತ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಅನಂತಮೂರ್ತಿ ಹೆಗಡೆ ನಾದಾವಧಾನದ ಕೆಲಸ ಕಾರ್ಯ ಗುರುತಿಸಿ ಮುಖ್ಯಸ್ಥ ಎನ್.ಜಿ.ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದರು.

ನಾದಾವಧಾನ ಸಂಸ್ಥೆಯ ವಿದ್ಯಾರ್ಥಿಗಳಿಂದ ಭಾಗವತಿಕೆ ಕಾರ್ಯಕ್ರಮಗಳು ಸುಂದರವಾಗಿ ಮೂಡಿಬಂದವು. ಕೊನೆಯ ಕಾರ್ಯಕ್ರಮವಾಗಿ ಎ.ಪಿ.ಪಾಠಕ್ ಭಾಗವತಿಕೆಯೊಂದಿಗೆ, ಸಿತಾರ್‌ನಲ್ಲಿ ಗೋಪಾಲಕೃಷ್ಣ ಹೆಗಡೆ ತಾರಗೋಡ, ಮದ್ದಲೆಯಲ್ಲಿ ಎನ್.ಜಿ.ಹೆಗಡೆ, ಚಂಡೆಯಲ್ಲಿ ಪ್ರಸನ್ನ ಹೆಗ್ಗಾರ್, ನಿರೂಪಣೆಯಲ್ಲಿ ಅಜಿತ್ ಕಾರಂತ್ ಪಾಲ್ಗೊಂಡು ಜನಮನ ಗೆದ್ದರು. ಇದಕ್ಕೂ ಪೂರ್ವದಲ್ಲಿ ಶ್ರೀರಕ್ಷಾ ಹೆಗಡೆ, ಅಭಿಜ್ಞಾ ಹೆಗಡೆ ಭಾಗವತಿಕೆಯಲ್ಲಿ ಪಾಲ್ಗೊಂಡು ಸಭಿಕರ ಮನಗೆದ್ದರು.

Share This
300x250 AD
300x250 AD
300x250 AD
Back to top