Slide
Slide
Slide
previous arrow
next arrow

ಚಂದನ ಶಾಲೆಗೆ ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಭೇಟಿ

300x250 AD

ಶಿರಸಿ: ಇಲ್ಲಿನ ನರೇಬೈಲ್ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಗೆ ಡಿ.೨೮ರಂದು ಡೆಪ್ಯುಟಿ ಕಮಾಂಡಂಟ್ ಮಹೇಂದ್ರ ಹೆಗಡೆ ಗೋಳಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೈನಿಕರ ಜೀವನದ ಬಗ್ಗೆ ಮತ್ತು ಸೈನಿಕರ ತ್ಯಾಗಗಳ ಬಗ್ಗೆ,ಸೇನೆಯ ವಿವಿಧ ವಿಭಾಗಗಳ ಬಗ್ಗೆ ತಿಳಿಸಿದರು.

ಅದೇ ರೀತಿ ಸೈನಿಕರು ಎದುರಿಸುವ ಸವಾಲುಗಳ ಬಗ್ಗೆ,ಶ್ವಾನ ದಳಗಳ ಬಗ್ಗೆ ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ವಿವರವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ವಿವರಿಸಿದರು. ದೇಶವನ್ನು ಸೈನಿಕರ ಜೊತೆ ಸೇರಿ ರಕ್ಷಿಸುವ ಬೇರೆ ಬೇರೆ ರಕ್ಷಣಾ ಪಡೆಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ಕಾರ್ಯದರ್ಶಿ ಎಲ್.ಎಂ. ಹೆಗಡೆ, ಮುಖ್ಯೋಪಾಧ್ಯಾಯರು, ಶಿಕ್ಷಕರು,ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top