Slide
Slide
Slide
previous arrow
next arrow

ಸಾಗರದಾಚೆ ಮೊಳಗಲಿ ಕನ್ನಡ ಡಿಂಡಿಮ: ಶಾಸಕ ಶಿವರಾಮ ಹೆಬ್ಬಾರ

300x250 AD

ಯಲ್ಲಾಪುರ: ಏಪ್ರಿಲ್ 24ರಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಸಿಂಗಪೂರ್ ನಲ್ಲಿ ನಡೆಯುವ ಎರಡನೇ ವಿಶ್ವ ಕನ್ನಡ ಹಬ್ಬಕ್ಕೆ ಆಯ್ಕೆಗೊಂಡ ಕೃಷಿಕ ಗಾಯಕ ಸಂಘಟಕ ಲೇಖಕ ಹಾಗೂ ನಿರೂಪಕ ರತ್ನಾಕರ ನಾಯ್ಕ ಹಾಗೂ ಗಾಯಕಿ ದಿವ್ಯಾ ಶೇಟ್ ರನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಶ್ಲಾಘಿಸಿ ಅಭಿನಂದಿಸಿದರು.

ನನ್ನ ಜಿಲ್ಲೆಯ ಹಾಗೂ ಮತ ಕ್ಷೇತ್ರದ ಕಲಾವಿದರು ಸಾಗರದಾಚೆ ಕನ್ನಡದ ಕಂಪನ್ನು ಹರಡಲಿದ್ದು ಇದು ನಮ್ಮ ಹೆಮ್ಮೆಯ ಸಂಗತಿ ಹಾಗಾಗಿ ಅವರಿಗೆ ನಮ್ಮ ಜಿಲ್ಲೆಯ ಪರವಾಗಿ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿ ಕಲಾವಿದರಿಗೆ ಸನ್ಮಾನಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕದಂಬ ಕಲಾ ವೇದಿಕೆ ಶಿರಸಿಯ ಪರವಾಗಿ ಕಲಾಪೋಷಕರಾದ ಹೆಬ್ಬಾರರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ವೀರಭದ್ರ ಗೌಡ್ರು ತಿಗಣಿ ಹಾಗೂ ಮಹೇಶ್ ನಾಯ್ಕ ಉಪ್ಪಳೇಕೊಪ್ಪ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top