Slide
Slide
Slide
previous arrow
next arrow

ದಾಂಡೇಲಿಯಲ್ಲಿ ಕ್ರೈಸ್ತ ಬಾಂಧವರ ಕ್ರಿಸ್‌ಮಸ್ ಹಬ್ಬದ ಸಂಭ್ರಮ

300x250 AD

ದಾಂಡೇಲಿ: ಕ್ರೈಸ್ತ ಧರ್ಮ ಬಾಂಧವರ ಪವಿತ್ರ ಹಾಗೂ ಸಂಭ್ರಮದ ಹಬ್ಬವಾದ ಕ್ರಿಸ್‌ಮಸ್‌ ಹಬ್ಬವನ್ನು ನಗರದಲ್ಲಿ ಸಂಭ್ರಮ, ಸಡಗರದಿಂದ ಸೋಮವಾರ ಆಚರಿಸಿದರು.

ನಗರದ ಬರ್ಚಿ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ವರ್ಕರ್ಸ ಚರ್ಚ್ ನಲ್ಲಿ ಭಾನುವಾರ ಸಂಜೆಯಿಂದಲೆ ಪ್ರಾರ್ಥನೆ‌ ಮೊದಲಾದ ಧಾರ್ಮಿಕ‌ ಕಾರ್ಯಕ್ರಮಗಳು ಜರುಗಿತು.

ಕ್ರೈಸ್ತ ಧರ್ಮಿಯರು ಚರ್ಚ್‌ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಆನಂತರ ಅಲ್ಲಿದ್ದ ಸ್ನೇಹಿತರು, ಬಂಧು ಮಿತ್ರರಿಗೆ ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.

300x250 AD

ಕ್ರೈಸ್ತ ಬಂಧುಗಳ ಮನೆ ಮತ್ತು ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ತುಂಬಿತ್ತು. ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ, ಸಿಹಿ ತಿಂಡಿ ಮಾಡಿ ಮನೆ‌ ಮನೆಗಳಲ್ಲಿ ಹಬ್ಬ ಆಚರಿಸಿದರೆ, ಕೆಲವರು ಮನೆಯಲ್ಲಿ ಕ್ರಿಸ್ತನ ಜನನ ವೃತ್ತಾಂತವನ್ನು ಗೊಂಬೆಗಳ ಮೂಲಕ ಗೋದಲಿ ರೂಪಿಸಿದ್ದರು. ಹಬ್ಬಕ್ಕಾಗಿ ನಗರದಲ್ಲಿ ಚರ್ಚ್‌ಗಳು ವಿದ್ಯುತ್‌ ದೀಪದ ಅಲಂಕಾರಗಳಿಂದ ಕಂಗೊಳಿಸುತ್ತಿದ್ದವು.

Share This
300x250 AD
300x250 AD
300x250 AD
Back to top