Slide
Slide
Slide
previous arrow
next arrow

ಸಂಗೀತದ ಸಾಧನೆ ಶ್ರದ್ಧೆ,ಆಸಕ್ತಿ, ಸತತ ಪ್ರಯತ್ನದಿಂದ ಸಾಧ್ಯ: ಶೈಲಜಾ ಗೋರ್ನಮನೆ

300x250 AD

ಶಿರಸಿ: ಕಲೆ ಮತ್ತು ಸಾಹಿತ್ಯದಂತಹವು ಮನುಷ್ಯನ ಮನಸಿನ ಹಸಿವನ್ನು ನೀಗಿಸುವ ಸಂಗತಿಗಳು.ಅಹಂಕಾರದಂತಹ ದೌರ್ಬಲ್ಯಗಳನ್ನು ಮೀರಿ ಮನುಷ್ಯನಾಗಲು ಸಂಗೀತ, ಸಾಹಿತ್ಯಗಳ ಮಾರ್ಗ. ಇಂದು ಅವಕಾಶಗಳು ಹೇರಳವಾಗಿದೆ.ಯಾರ್ಯಾರಿಗೆ ಯಾವ ಯಾವ ಕ್ಷೇತ್ರದಲ್ಲಿ ಆಸಕ್ತಿ ಮತ್ತು ಗತಿ ಇದೆಯೋ ಆಯಾಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಹೇಳಿದ್ದಾರೆ.

ಅವರು ಶಿರಸಿಯ ನೆಮ್ಮದಿ ಕುಟೀರದಲ್ಲಿರುವ ರಂಗಧಾಮದಲ್ಲಿ ನಡೆದ ಶಿರಸಿಯ ‘ಸುಶ್ರಾವ್ಯ ಸಂಗೀತ ಟ್ರಸ್ಟ್ ನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತೆ ಶೈಲಜಾ ಗೊರ್ನಮನೆ, “ಸಂಗೀತದ ಸಾಧನೆಯು ಶ್ರದ್ಧೆ,ಆಸಕ್ತಿ,ಸತತ ಪ್ರಯತ್ನದಿಂದ ಸಾಧ್ಯ. ಸಾಧನೆಯೆಂದರೆ ಅಭಿರುಚಿಯ ಸ್ಥರವನ್ನು ಎತ್ತರಿಸಿಕೊಳ್ಳುತ್ತಾ ಸಂಗೀತವನ್ನು ನಾದದ ಮಂದ್ರದಲ್ಲಿ ಲಯವಾಗುವ ಆನಂದಾನುಭೂತಿಯನ್ನು ಪಡೆಯುವುದಾಗಿದೆ.ಅದು ಸಂಗೀತಗಾರ ಹಾಗೂ ಕೇಳುಗ ಇಬ್ಬರ ಸಾಧನೆಯೂ ಆಗಿರುತ್ತದೆ.” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ಶಿಕ್ಷಕರಾದ ವಿದೂಷಿ ಶ್ರೀಮತಿ ಸ್ಮಿತಾ ಎಂ. ಹೆಗಡೆ ವಹಿಸಿ, ” ಸಂಗೀತೋಪಾಸನೆ ಭಾವಗಳ ಸಮೃದ್ಧಿಯನ್ನು ಹೆಚ್ಚಿಸಿ ಉತ್ತಮ ಅಭಿರುಚಿಯನ್ನು ಬೆಳಸುತ್ತದೆ. ದೇಹ,ಮನಸಿನ ಆರೋಗ್ಯಕ್ಕೂ ಉತ್ತಮ ಪರಿಣಾಮವನ್ನು ಕೊಡುತ್ತದೆ” ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ದಂಪತಿಗಳನ್ನು ಸನ್ಮಾನಿಸಲಾಯಿತು.

300x250 AD

ಕಾರ್ಯಕ್ರಮದ ಪ್ರಸ್ತಾವನೆಯನ್ನು ಸುಶ್ರಾವ್ಯ ಸಂಗೀತ ಟ್ರಸ್ಟ್ ನ ಶಿಕ್ಷಕಿಯಾದ ಶ್ರೀಮತಿ ಭವ್ಯಾ ಕೆ ಭಟ್ ಪ್ರಸ್ತಾವಿಕವಾಗಿ ಮಾತನಾಡಿದರು. ಭವ್ಯಾ ಹಳೆಯೂರು ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ,ವಿದೂಷಿ ಪ್ರತಿಭಾ ಹೆಗಡೆಯವರಿಂದ ಹಿಂದುಸ್ತಾನಿ ಗಾಯನ ನಡೆಯಿತು. ವಿದ್ಯಾರ್ಥಿಗಳಿಂದಲೂ ಸಂಗೀತ ಕಾರ್ಯಕ್ರಮ ನಡೆಯಿತು.ಹಾರ್ಮೋನಿಯಂನ್ನು ಕುಮಾರ ಧೀರಜ್ ಹೆಗಡೆ ನುಡಿಸಿದರು. ತಬಲಾ ಸಾತ್ ಅನ್ನು ವಿದ್ವಾನ್ ಮಂಜುನಾಥ ಮೋಟೀನ ಸರ ಹಾಗೂ ಕಿರಣ್ ಕಾನಗೋಡು ನೀಡಿದರು.

Share This
300x250 AD
300x250 AD
300x250 AD
Back to top