ಶಿವಮೊಗ್ಗ: ನೇಪಾಳದ ಕಟ್ಮಂಡುವಿನಲ್ಲಿ ಡಿ. 24 ರಿಂದ 28 ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಹಿಪ್ ಹಾಪ್ ನೃತ್ಯ ಸ್ಪರ್ಧೆಗೆ ಶಿವಮೊಗ್ಗ ನಗರದ ಪ್ರಸಿದ್ದ ನೃತ್ಯ ಸಂಸ್ಥೆಯಾಗಿರುವ ಸ್ಟೆಪ್ ಹೋಲ್ಡರ್ಸ್ ನ 21 ನೃತ್ಯಪಟುಗಳು ಆಯ್ಕೆಯಾಗಿದ್ದಾರೆ.
ಹನ್ಸಿ, ಸಿದ್ದಾರ್ಥ ಶೆಟ್ಟಿ, ಕೃತಿ, ತಾನ್ವಿ, ಸಚಿತಾ, ಸುಂಕಸಾಳದ ಪ್ರಚೇತ ಎನ್ ಭಟ್, ಪ್ರತಮ್, ನಿಸರ್ಗ, ಅಕ್ಷಯ್, ಪಾರ್ಥ, ದಿವಿಜ್, ನಿಶ್ಚಿತ, ವೈಶಾಕ, ಶ್ರೇಯಸ್, ಉಮಾಪತಿ, ತೇಜಸ್, ದಿಶಾ, ಆರ್ಯನ್, ಸಚಿನ್, ನಿಯಾ, ಮಾನ್ಯ, ನಿಧಿ ನಾಯ್ಕ, ವಿಶಾಲ್ ಆಯ್ಕೆ ಆಗಿರುವ ನೃತ್ಯಪಟುಗಳು.
ಇಂಡಿಯಾ ಸ್ಪೋರ್ಟ್ಸ್ ಏರೋಬಿಕ್ಸ್ ಆಂಡ್ ಪಿಟ್ ನೆಸ್(ಐ ಎಸ್ ಎ ಎಫ್ ಎಫ್)ನಿಂದ ಮಂಜೂರಾತಿ ಪಡೆದಿರುವ ಸ್ಪೋರ್ಟ್ಸ್ ಏರೋಬಿಕ್ಸ್ ಆಂಡ್ ಪಿಟ್ ನೆಸ್ ಸೋಶಿಯೇಶನ್ ಆಪ್ ಕರ್ನಾಟಕ (ಎಸ್ ಎ ಎಫ್ ಎಕೆ )ವತಿಯಿಂದ ಮಂಡ್ಯದ ಪೀ ಇಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 18 ನೇ ರಾಷ್ಟ್ರೀಯ ಏರೋಬಿಕ್ಸ್ ಚಾಂಪಿಯನ್ ಷಿಪ್ ನ ಹಿಪ್ ಹಾಪ್ ವಿಭಾಗದಲ್ಲಿ ಸ್ಟೆಪ್ ಹೋಲ್ಡರ್ಸ್ ಪ್ರತಿನಿಧಿಸಿದ್ದ ಕರ್ನಾಟಕ ತಂಡದ ಪಾಲಾಗಿದ್ದ ಹಿನ್ನಲೆಯಲ್ಲಿ ಈ ಅವಕಾಶ ದೊರೆತಿದೆ ಎಂದು ಟೀಮ್ ಕೋಚ್ ಅರುಣ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.