Slide
Slide
Slide
previous arrow
next arrow

ಟಿ.ಎಸ್.ಎಸ್.ನಿಂದ ವಿದ್ಯಾರ್ಥಿ ವೇತನ ವಿತರಣೆ

300x250 AD

ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ ವತಿಯಿಂದ 2023-24 ನೇ ಸಾಲಿಗಾಗಿ 334 ವಿದ್ಯಾರ್ಥಿಗಳಿಗೆ ಒಟ್ಟೂ ರೂ.8,24,000/- ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಡಿ.23 ರಂದು ಮಧ್ಯಾಹ್ನ 3.30ಕ್ಕೆಸಂಘದ ವ್ಯಾಪಾರ ಅಂಗಳದಲ್ಲಿ ನಡೆದ ಸಮಾರಂಭದಲ್ಲಿ ಹಾಜರಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ. ನಾಯ್ಕ, ನಾರಾಯಣ ಶ್ರೀಪತಿ ಭಟ್ಟ ಸುಗಾವಿ, ಹಾಗೂ ಕುಮಾರ ಹರೀಶ ಶಂಕರ ಭಟ್ಟ ಕೋಮಡಿ ಇವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿವೇತನ ವಿತರಿಸಿದರು.ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವಿ. ವೈದ್ಯ ಮತ್ತಿಘಟ್ಟಾ ಇವರುಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವಿ. ವೈದ್ಯ ಮತ್ತಿಘಟ್ಟಾ ಪ್ರಾಸ್ತಾವಿಕ ಮಾತನಾಡಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಸದಸ್ಯರ ಕ್ಷೇಮ ನಿಧಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ನಾವು ಹೀಗೆ ನೀಡುತ್ತಿರುವುದು ತುಂಬಾ ಕಡಿಮೆಯೇ ಆಗಿದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು. ಪದವಿಪೂರ್ವ ಶಿಕ್ಷಣ, ಪದವಿ ಶಿಕ್ಷಣ ಹಾಗೂ ಉನ್ನತ ಶಿಕ್ಷಣಕ್ಕೆ ನೀಡುವ ಧನ ಸಹಾಯದ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಿದ್ದು, ಅದನ್ನು ಪರಿಶೀಲಿಸಿದ ನಂತರ ಧನ ಸಹಾಯವನ್ನು ನೀಡಲಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ. ನಾಯ್ಕ, ಇವರು ಮಾತನಾಡಿ ಈ ಮೊದಲೆಲ್ಲಾ ಶಿಕ್ಷಣ ಕಲಿಯುವುದು ಹಾಗೂ ಕಲಿಸುವುದು ಜ್ವಲಂತ ಸಮಸ್ಯೆಯಾಗಿತ್ತು. ಆದರೆ ಈಗ ಕಲಿಯುವುದರಲ್ಲಿ ಪ್ರತಿಯೊಬ್ಬರೂ ಉತ್ತಮರಾಗಿದ್ದು, ಶಿಕ್ಷಣ ಕಲಿಯಲು ನೀಡುವ ಶುಲ್ಕವು ಜಾಸ್ತಿಯಾಗಿದೆ. ಇದರಿಂದ ಎಲ್ಲರಿಗೂ ಕಲಿಯಲು ಸಾಧ್ಯವಿಲ್ಲ. ಮಕ್ಕಳಿಗೆ ಶಿಕ್ಷಣ ಕಲಿಯಲು ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುವುದರಿಂದ ಮಕ್ಕಳ ಭವಿಷ್ಯವು ಉಜ್ವಲವಾಗುತ್ತದೆ. ಈ ಕಾರ್ಯಕ್ರಮದಲ್ಲಿ ನಾನು ಕೇವಲ ಶಾಸಕನಾಗಿ ಅಲ್ಲದೆ, ಈ ಸಂಸ್ಥೆಯ ಸದಸ್ಯನಾಗಿಯೂ ಭಾಗವಹಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು. ಸಂಘದ ಏಳಿಗೆಗೆ ನಾನು ಸದಾ ಸಹಕರಿಸುತ್ತೇನೆ ಎಂದು ಹೇಳಿದರು.

300x250 AD

ದಿ. ಶ್ರೀಮತಿ ನೇತ್ರಾವತಿ ಶ್ರೀಪಾದ ಹೆಗಡೆ ಕಡವೆಯವರ ಸ್ಮರಣಾರ್ಥ ಇರಿಸಿರುವ ದತ್ತಿನಿಧಿ ಹಾಗೂ ರವೀಂದ್ರ ಗ. ತೇಲಂಗ ಕೊರ್ಲಕಟ್ಟಾ ಅವರ ಸ್ಮರಣಾರ್ಥ ಇರಿಸಿರುವ ದತ್ತಿನಿಧಿ, ಹಾಗೂ ಕಾರ್ತಿಕ ಶ್ರೀಕಾಂತ ಹೆಗಡೆ ಗುಡ್ಡೆಕಣ ಇವರು ಇರಿಸಿರುವ ದತ್ತಿನಿಧಿಗಳಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ಕುಮಾರಿ ಎಚ್. ವಿ. ಸೌಜನ್ಯ ಗುಬ್ಬಿಗದ್ದೆ ಇವಳಿಗೆ ದತ್ತಿನಿಧಿ ಪುರಸ್ಕಾರ ನೀಡಲಾಯಿತು. ರಾಮಚಂದ್ರ ನರಸಿಂಹ ಹೆಗಡೆ ಕಿಬ್ಬಳ್ಳಿ ಬೈರುಂಬೆ ಇರಿಸಿರುವ ದತ್ತಿನಿಧಿ, ಶ್ರೀಕಾಂತ ಮಹಾಬಲೇಶ್ವರ ಭಟ್ಟ ಕೆರೆಕೈ ಇರಿಸಿರುವ ದತ್ತಿನಿಧಿಯಿಂದ ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚಿನ ಅಂಕಗಳಿಸಿರುವ ಕುಮಾರಿ ರಜತಾ ಮಂಜುನಾಥ ಹೆಗಡೆ ಪ್ರಗತಿ ನಗರ ಶಿರಸಿ ಇವಳಿಗೆ ದತ್ತಿನಿಧಿ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ವರ. ಎನ್. ಭಟ್ಟ ತೋಟಿಮನೆ,ಆಡಳಿತ ಮಂಡಳಿ ಸದಸ್ಯರುಗಳಾದ ಗಣಪತಿ ವಿ. ಜೋಶಿ, ಕೊಪ್ಪಲತೋಟ, ಪುರುಷೋತ್ತಮ ಎನ್. ಹೆಗಡೆ ಕಳಲೆಮಕ್ಕಿ, ದತ್ತಗುರು ಎಸ್. ಹೆಗಡೆ ಕಡವೆ, ರವೀಂದ್ರ ಜೆ. ಹೆಗಡೆ ಹಿರೇಕೈ, ಅಶೋಕ ಜಿ. ಹೆಗಡೆ ಬಿಳಗಿ, ವಸಂತ ಟಿ. ಹೆಗಡೆ ಶಿರಿಕುಳಿ, ರವೀಂದ್ರ ಎಸ್. ಹೆಗಡೆ ಹಳದೋಟ, ದೇವೇಂದ್ರ ಆಯ್. ನಾಯ್ಕ ಕುಪ್ಪಳ್ಳಿ, ವೀರೇಂದ್ರ ಪಿ. ಗೌಡರ್ ತೋಟದಮನೆ, ನರಸಿಂಹ ಜಿ. ಹೆಗಡೆ ಬಾಳೆಗದ್ದೆ, ಶ್ರೀಮತಿ ನಿರ್ಮಲಾ ಆರ್. ಭಟ್ಟ ಅಗಸಾಲ ಬೊಮ್ಮನಳ್ಳಿ, ಶ್ರೀಮತಿ ವಸುಮತಿ ಬಿ. ಭಟ್ಟ ಮಾವಿನಕೋಡ,ಸಂಸ್ಥೆಯ ಹಣಕಾಸು & ವ್ಯಾಪಾರಿ ಮಾರ್ಗದರ್ಶಕರಾದ ಪ್ರಕಾಶ ಎಸ್. ಹೆಗಡೆ ಹುಳಗೋಳ, ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕರಾದ ವಿಜಯಾನಂದ ಭಟ್ಟ, ಸಿಬ್ಬಂದಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನುಸಂಘದ ಉಪಾಧ್ಯಕ್ಷರಾದ ಮಹಾಬಲೇಶ್ವರ. ಎನ್. ಭಟ್ಟ ತೋಟಿಮನೆ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಘದ ನಿರ್ದೇಶಕರಾದ ರವೀಂದ್ರ ಜೆ. ಹೆಗಡೆ ಹಿರೇಕೈ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಸಿಬ್ಬಂದಿ ಗೋಪಾಲ ಹೆಗಡೆ ಇವರು ಮಾಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top