Slide
Slide
Slide
previous arrow
next arrow

ಶ್ರೀನಿಕೇತನ ಶಾಲೆಯಲ್ಲಿ ಭಗವದ್ಗೀತಾ ಜಯಂತಿ ಆಚರಣೆ

300x250 AD

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಡಿ.22, ಶುಕ್ರವಾರದಂದು ‘ಗೀತಾ ಜಯಂತಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಪ್ರದೀಪ್ ಜೋಶಿ ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಪರಮಾತ್ಮ ಸ್ವರೂಪಿಯಾದ ಶ್ರೀಕೃಷ್ಣ ಹಾಗೂ ಆತನ ಮಿತ್ರನಾದ ಅರ್ಜುನನ ನಡುವೆ ಏರ್ಪಟ್ಟ ಸಂವಾದದ ಕುರಿತು ಮಾತನಾಡಿ ಭಗವಂತನು ತನ್ನ ಶಿಷ್ಯನಿಗೆ ನೀಡಿದ ಭಗವದ್ಗೀತೆಯ ಉಪದೇಶದ ಬಗ್ಗೆ ತಿಳುವಳಿಕೆ ನೀಡಿದರು. ಅನಂತರ ಸಾಮೂಹಿಕವಾಗಿ ಮಕ್ಕಳು ಭಗವದ್ಗೀತೆಯ ಸ್ತೋತ್ರಗಳನ್ನು ಪಠಿಸಿದರು. ಅತಿಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ವಸಂತ್ ಭಟ್, ಉಪಪ್ರಾಂಶುಪಾಲರಾದ ಶ್ರೀಮತಿ ವಸುಧಾ ಹೆಗಡೆ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಮಂಗಳಗೌರಿ ಸ್ವಾಗತಿಸಿ ವಂದಿಸಿದರು ಹಾಗೂ 8ನೇ ತರಗತಿಯ ವಿದ್ಯಾರ್ಥಿ ಹಿಮಾಂಶು ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top