Slide
Slide
Slide
previous arrow
next arrow

ಇಂದು ಹೈಟೆಕ್ ಕಂಪ್ಯೂಟರ್ಸ್ ವಾರ್ಷಿಕ ಸ್ನೇಹ ಸಮ್ಮಿಲನ

300x250 AD

ಯಲ್ಲಾಪುರ: ಹೈಟೆಕ್ ಕಂಪ್ಯೂಟರ್ಸ್ ನ 15 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ವಿವಿಧ ಕಾರ್ಯಕ್ರಮಗಳೊಂದಿಗೆ ಡಿ.23 ರ ಸಂಜೆ 6 ಕ್ಕೆ ಪಟ್ಟಣದ ದೇವಿ ಮೈದಾನದಲ್ಲಿ ನಡೆಯಲಿದೆ.

ನ್ಯೂ ಅಕ್ಷಯ ಡೆಕೋರೇಟರ್ಸ್ ಹಾಗೂ ಭಾರತ ಶಾಮಿಯಾನ ಅವರ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ನಿವೃತ್ತ ಕಮಾಂಡರ್ ಮನೋಜ ಬಾಡ್ಕರ್ ಉದ್ಘಾಟಿಸಲಿದ್ದಾರೆ. ಡಿಡಿಪಿಐ ಪಾರಿ ಬಸವರಾಜ, ತಹಸೀಲ್ದಾರ ಎಂ. ಗುರುರಾಜ, ಹೈಟೆಕ್ ಕಂಪ್ಯೂಟರ್ಸ್ ಸಂಸ್ಥಾಪಕರಾದ ಆನಂದ ಕೊಂಡ್ಲಿ, ದೇವದತ್ತ ನಾಯ್ಕ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸವಿತಾ ನಾಯ್ಕ, ವೈಟಿಎಸ್ಎಸ್ ಅಧ್ಯಕ್ಷ ರವಿ ಶಾನಭಾಗ, ಕಿರವತ್ತಿ ಪಿಯು ಕಾಲೇಜ್ ಪ್ರಾಂಶುಪಾಲ ಸುಭಾಸ ನಾಯಕ, ಯಲ್ಲಾಪುರ ಸರ್ಕಾರಿ ಪಿಯು ಕಾಲೇಜ್ ಪ್ರಾಂಶುಪಾಲ ಎಸ್.ಟಿ.ವೈದ್ಯ, ಗ್ರಾಮದೇವಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಶಾಮಿಯಾನ ಯೂನಿಯನ್ ಅಧ್ಯಕ್ಷ ವೈಭವ ಕಿತ್ತೂರ, ಹಿರಿಯ ಛಾಯಾಗ್ರಾಹಕ ಗಣಪತಿ ಹೆಗಡೆ ಭಾಹವಹಿಸಲಿದ್ದಾರೆ.
ನಂತರ ಸಂಗೀತ, ಜಾದು ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಪ್ರದೀಪ ಯಲ್ಲಾಪುರಕರ್ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top