ಶಿರಸಿ: ಇಲ್ಲಿನ ಶ್ರೀ ಮಾರಿಕಾಂಬಾ ಜೂನಿಯರ್ ಕಾಲೇಜ್‌ನಲ್ಲಿ ಶಿರಸಿ ತಾಲೂಕ ಪೊಲೀಸ್ ಇಲಾಖೆ ವತಿಯಿಂದ ಡಿ.22, ಶುಕ್ರವಾರದಂದು ನಡೆದ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಮತ್ತು ಪರಿಹಾರೋಪಾಯಗಳು ಎಂಬ ವಿಷಯದ ಕುರಿತು ಪ್ರಬಂಧ ಬರಹ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆಯ ಮೂವರು ವಿದ್ಯಾರ್ಥಿನಿಯರು ಪಾಲ್ಗೊಂಡು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಕುಮಾರಿ ಸಂತೋಷಿ ಪಟಗಾರ್ ಪ್ರಥಮ ಸ್ಥಾನ, ಕುಮಾರಿ ಅನನ್ಯಾ ನಾಯ್ಕ್ ದ್ವಿತೀಯ ಸ್ಥಾನ, ಕುಮಾರಿ ನವ್ಯಾ ಹೆಗಡೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಈ ಸಾಧನೆಗೆ ಲಯನ್ಸ್ ಶಾಲಾ ಸಮೂಹಗಳ ಪ್ರಾಂಶುಪಾಲರು, ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಶಾಲಾ ಆಡಳಿತ ಮಂಡಳಿಯವರು, ಪಾಲಕ ವೃಂದದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.