ಶಿರಸಿ: ತಾಲೂಕಿನ ವಾನಳ್ಳಿ ಸಮೀಪದ ಭೂಸನಕೇರಿಯ ತವರುಮನೆ ಹೋಮ್ಸ್ಟೇಯಲ್ಲಿ ಡಿ.23ರಿಂದ ಡಿ.28ರವರೆಗೆ ಆಲೆಮನೆ ಹಬ್ಬವನ್ನು ಆಯೋಜಿಸಲಾಗಿದೆ.
ಡಿ.23, ಶನಿವಾರ ಸಂಜೆ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮತಿ ನೇತ್ರಾವತಿ ಹಾಗೂ ಅನಂತ್ ಹೆಗಡೆ ಮೆಣಸಿಮನೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಎನ್.ಎಸ್. ಹೆಗಡೆ ಕೋಟಿಕೊಪ್ಪ ದಂಪತಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ರಂಗ ಕಲಾವಿದ ಎಸ್.ಎನ್.ಸೇತುರಾಮ್ ಉಪಸ್ಥಿತರಿರಲಿದ್ದಾರೆ.
ಡಿ.24, ರವಿವಾರದಂದು ಗಾಯಕ ರವಿ ಮೂರೂರು ಇವರಿಂದ ಸಂಜೆ 5 ಗಂಟೆಯಿಂದ ‘ಶಾಲ್ಮಲೆಯ ತೀರದಲ್ಲಿ’ ಗಾಯನ ಕಾರ್ಯಕ್ರಮ ನಡೆಯಲಿದ್ದು, ತಬಲಾದಲ್ಲಿ ಗಣೇಶ್ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಮಧುಸೂಧನ ಭಟ್ ಅಗ್ರಹಾರ ಸಹಕರಿಸಲಿದ್ದಾರೆ. ಅಂತೆಯೇ ಲಕ್ಷ್ಮಣ ಸಿದ್ದಿ ಗದ್ದೇಹಳ್ಳಿ ಮತ್ತು ತಂಡದವರಿಂದ ಬುಡಕಟ್ಟು ಜಾನಪದ ನೃತ್ಯ ಪ್ರದರ್ಶನ ನಡೆಯಲಿದೆ. ಈ ವೇಳೆ ಹಿರಿಯ ಪತ್ರಕರ್ತ ಬಿ.ಗಣಪತಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಿ, ಹಾಗೂ ಪ್ರತಿದಿನ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಆಲೇಮನೆ ಹಬ್ಬದಲ್ಲೂ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.