ಶಿರಸಿ: “ವತನ ಕಲಾ ಕುಸುಮ ಟ್ರಸ್ಟ್ (ರಿ.)” ಶಿರಸಿ, ಉ.ಕ. ಇದರ ಉದ್ಘಾಟನಾ ಸಮಾರಂಭದ ನಿಮಿತ್ತ ಡಿ.24, ರವಿವಾರದಂದು ‘ಕಲಾ ಸಂಗಮ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಂದು ಸಾಯಂಕಾಲ 4.30 ಕ್ಕೆ ಪುಟ್ಟನಮನೆ ಮೂಲೇಮನೆಯ ಅಭಿನವ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಮನು ಹೆಗಡೆ ಪುಟ್ಟನಮನೆ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಇವರ ಉಪನ್ಯಾಸ, ಪಂಡಿತ್ ಡಾ.ಶಶಾಂಕ್ ಮಕ್ತೇದಾರ ಗೋವಾ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ವಿದೂಷಿ ಡಾ.ಪೂಜಾ ಲೋಕೇಶ್ ಇವರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಹ ಕಲಾವಿದರಾಗಿ ತಬಲಾ ವಾದನದಲ್ಲಿ ವಿದ್ವಾನ್ ಗುರುಮೂರ್ತಿ ವೈದ್ಯ, ಬೆಂಗಳೂರು, ಸಂವಾದಿನಿಯಲ್ಲಿ ವಿದ್ವಾನ್ ಸತೀಶ ಭಟ್ಟ ಹೆಗ್ಗಾರ ಅವರುಗಳು ಸಾಥ್ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಶುಭಾ ಹೆಗಡೆ ಜಡ್ಡೀಮನೆ ಅವರನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಆಸಕ್ತರಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ತರಬೇತಿ ನೀಡುವುದು, ನುರಿತ ಕಲಾವಿದರಿಂದ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆಗಳನ್ನು ನಡೆಸುವುದು ಇತ್ಯಾದಿ ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಮನು ಹೆಗಡೆ ತಿಳಿಸಿದ್ದಾರೆ.