Slide
Slide
Slide
previous arrow
next arrow

ಡಿ.23ಕ್ಕೆ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮರ್ಪಣಾ ಕಾರ್ಯಕ್ರಮ

300x250 AD

ಭಟ್ಕಳ: ಭಟ್ಕಳ ತಾಲೂಕಿನ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದಿಂದ ಡಿ.23 ಶನಿವಾರದಂದು ಸಂಜೆ 5.30 ಕ್ಕೆ ನಾಗಯಕ್ಷೆ ಸಭಾಭವನದಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸಮರ್ಪಣಾ ಕಾರ್ಯಕ್ರಮ ನೆರವೇರಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಮೀನುಗಾರಿಕಾ ಸಚಿವರು ಹಾಗೂ ಉ.ಕ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಭಟ್ಕಳ ಉಪ ವಿಭಾಗದ ಸಹಾಯಕ ಅಯುಕ್ತೆ ನಯನಾ ಎಸ್, ಡಿ.ವೈ.ಎಸ್.ಪಿ. ಕೆ. ಶ್ರೀಕಾಂತ್ ಹಾಗೂ ನಾಗಯಕ್ಷೆ ಸಭಾಭವನದ ಧರ್ಮದರ್ಶಿ ರಾಮದಾಸ್ ಪ್ರಭು ಉಪಸ್ಥಿತರಿರುವರು.

300x250 AD

ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಝೇಂಕಾರ ಮೆಲೋಡಿಸ್ ತಂಡದ ನೇತೃತ್ವದಲ್ಲಿ ರಾಜ್ಯಮಟ್ಟದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.

Share This
300x250 AD
300x250 AD
300x250 AD
Back to top