ಕಾರವಾರ: ಇಲ್ಲಿನ ಶಹರ ಪೊಲೀಸ್ ಠಾಣೆ, ಕಾರವಾರ ಸಂಚಾರ ಪೊಲೀಸ್ ಠಾಣೆ, ಕಾರವಾರ ಗ್ರಾಮೀಣ ಠಾಣೆ ಮತ್ತು ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಮಾದಕ ವಸ್ತುಗಳ ಬಳಕೆ ಮತ್ತು ಪೂರೈಕೆ ವಿರುದ್ಧ ವಿಶೇಷ ಜಾಗೃತಿಗಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು,
ಕಾರವಾರ ವಿಭಾಗದ ಉಪಾಧೀಕ್ಷಕ ವ್ಯಾಲಂಟೈನ್ ಡಿಸೋಜ ಚಾಲನೆ ನೀಡಿದರು. ಜಾಥಾ ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡು, ಅರ್ಜುನ್ ಟಾಕೀಸ್, ಕಾಳಿ ರಿವರ್ ಗಾರ್ಡನ್, ಟೋಲ್ ನಾಕಾ, ಕಾಜುಬಾಗ್ ಸರ್ಕಲ್, ಹೂವಿನ ಚೌಕ, ಸುಭಾಷ್ ಸರ್ಕಲ್ ಮೂಲಕ ಶಹರ ಪೊಲೀಸ್ ಠಾಣೆಯವರೆಗೆ ಸಂಚರಿಸಿ ಸಾರ್ವಜನಿಕರಿಗೆ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿತು.