Slide
Slide
Slide
previous arrow
next arrow

ಟಿಪ್ಪರ್ ಅಪಘಾತಕ್ಕೆ ಯುವಕ ಸಾವು: ಅಧಿಕಾರಗಳ ಬಿಗಿ ಕ್ರಮ: ಥಂಡಾ ಹೊಡೆದ ಮರಳು ಉದ್ಯಮ

300x250 AD

ಹೊನ್ನಾವರ : ತಾಲೂಕಿನ ಕರಿಕುರ್ವ ಸೇತುವೆ ಹತ್ತಿರ ಮರಳು ಸೈಟ್ ನಲ್ಲಿ ಕೆಲಸಕ್ಕೆ ಹೋಗಿದ್ದ ವಿದ್ಯಾರ್ಥಿ ಟಿಪ್ಪರ್ ಅಪಘಾತದಲ್ಲಿ ಮೃತ ಪಟ್ಟ ನಂತರ ಹಗಲು ರಾತ್ರಿ ಎನ್ನದೆ ನಡೆಯುತ್ತಿದ್ದ ಅಕ್ರಮ ಮರಳು ಉದ್ಯಮದ ಸದ್ದು ಅಡಗಿದೆ. ಅಧಿಕಾರಿಗಳ ಬಿಗಿ ಕ್ರಮಕ್ಕೆ ಮರಳುಗಾರಿಕೆ ಥಂಡಾ ಹೊಡೆದಿದೆ.

ಕಳೆದ ಹಲವಾರು ವರ್ಷಗಳಿಂದ ಪಕ್ಷ ಭೇದ ಮರೆತು ಅಕ್ರಮ ಮರಳುಗಾರಿಕೆ ಎಡೆಬಿಡದೆ ನಡೆಯುತ್ತಿತ್ತು. ಅಪಘಾತವಾಗಲಿ, ನೀರಿನಲ್ಲಿ ಮುಳುಗಲಿ, ಹೊಡೆದಾಟವಾಗಲಿ, ಸಾವು ನೋವಾಗಲಿ ಏನೇ ಆದರೂ ಅಕ್ರಮ ಮರಳು ಸಾಗಾಟಕ್ಕೆ ಮಾತ್ರ ತಡೆ ಬೀಳುತ್ತಿರಲಿಲ್ಲ.  ಒಂದೆರಡು ದಿನದ ಹಿಂದೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿ ಮೃತ ಪಟ್ಟ ಘಟನೆ ನಂತರ ತಾಲೂಕಿನ ಹೊಳೆ ಇಚೀನ ಅಕ್ರಮ ಮರಳುಗಾರಿಕೆಗೆ ಅಧಿಕಾರಿಗಳು ಸದ್ಯದ ಮಟ್ಟಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

ಹೊನ್ನಾವರದಿಂದ ಗೇರುಸೊಪ್ಪ ತನಕದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನದಿ ಪಾತ್ರದಲ್ಲಿ ಮತ್ತು ಅದರ ಒಳ ಪ್ರದೇಶದಲ್ಲಿರುವ ನದಿಯ ತಟದಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆದಿತ್ತು. ಇವರ ಅಕ್ರಮ ಮರಳು ಸಾಗಾಟಕ್ಕೆ ಸ್ಥಳೀಯ ಗ್ರಾಮ ಪಂಚಾಯತ ಮಟ್ಟದಿಂದ ಕಂದಾಯ, ಅರಣ್ಯ ಹೀಗೆ ಪ್ರತಿಯೊಂದು ಇಲಾಖೆಯ ಗಮನಕ್ಕೆ ಇದ್ದರೂ ತಡೆಯುವ ಪ್ರಯತ್ನ ಮಾತ್ರ ಮಾಡುತ್ತಿರಲಿಲ್ಲ. ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಬಂದರೆ ಅವರಿಗೆ ತಾಲೂಕಾ ಮಟ್ಟದ ಅಧಿಕಾರಿಗಳ ಸಹಕಾರ ಸಿಗುತ್ತಿರಲಿಲ್ಲ ಎನ್ನುವ ಮಾತು ಆಗಾಗ ಕೇಳಿ ಬರುತ್ತಿತ್ತು.

ಅಧಿಕಾರಿಗಳಿಗೆ ತರಾತುರಿ :
ಮರಳುಗಾರಿಕೆ ಮಾಡುವವರಿಗೆ ಉದ್ಯಮ ನಡೆಸುವ ಗಡಿಬಿಡಿ ಆದರೆ, ಇನ್ನೂ ಕೆಲ ಅಧಿಕಾರಿಗಳಿಗೆ, ಇವರಿಗಿಂತ ತರಾತುರಿ ಹೆಚ್ಚಾದಂತೆ ಕೆಲವೊಂದು ಬೆಳವಣಿಗೆಯಲ್ಲಿ ಕಂಡುಬರುತ್ತಿದೆ. ಹಿರಿಯ ಅಧಿಕಾರಿಗಳಿಕ್ಕಿಂತ ಕೆಲವು ಸಿಬ್ಬಂದಿಗಳು ಇಲ್ಲಿ ತಮ್ಮ ಕೈ ಚಳಕ ತೋರಿಸುತ್ತಿರುವುದು ಸಂಬಂಧ ಪಟ್ಟ ಇಲಾಖೆಗೆ, ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಆಗಿ ಪರಿಣಮಿಸುತ್ತಿದೆ. ಸಿಬ್ಬಂದಿ ಆದರೂ ಕೂಡ ಅವರಿಗೆ ಇರುವ ಪ್ರಭಾವ ಹಿರಿಯ ಅಧಿಕಾರಿಗಳ ಒಡನಾಟ ಅವರ ಕಾರ್ಯವ್ಯಾಪ್ತಿಗೂ ಮೀರಿ ಅಧಿಕಾರ ಚಲಾಯಿಸುತ್ತಿರುವುದು ಜನಸಾಮಾನ್ಯರ, ಕೆಲವು ಪ್ರಮುಖರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಮೀನುಗಾರರಿಗೂ ಸಂಕಷ್ಟ :
ಶರಾವತಿ ನದಿಯಲ್ಲಿ ವ್ಯಾಪಿಸಿರುವ ಮರಳುಗಾರಿಕೆ ಮತ್ತು ದೋಣಿ ವಿಹಾರ ತಮ್ಮ ಸಾಂಪ್ರದಾಯಿಕ ಮೀನುಗಾರಿಕೆ ಮಾಡಿಕೊಂಡು ಬಂದಿದ್ದ ಮೀನುಗಾರರ ಉದ್ಯೋಗಕ್ಕೂ ಕುತ್ತು ತಂದಿದೆ. ನದಿಯ ಆಳದವರೆಗೂ ಮರಳು ತೆಗೆಯುವುದು ಮತ್ತು ಪ್ರವಾಸಿ ಬೋಟ್ ಗಳ ಅಬ್ಬರಕ್ಕೆ ಮೀನು ಅಡಗಿ ಕೂರುವ ಪರಿಸ್ಥಿತಿ ಉಂಟಾಗಿದೆ. ಮೀನುಗಾರ ಬಲೆ ಬೀಸಿದರೆ ಖಾಲಿ ಬಲೆ ಎಳೆಯುವಂತಾಗಿದೆ. ಉಳ್ಳವರ ಉದ್ಯೋಗದ ಲಾಬಿಗೆ ಬಡ ಮೀನುಗಾರರ ನಿತ್ಯದ ದುಡಿಮೆಗೆ ಕುತ್ತಾಗಿದೆ. ಎಷ್ಟೇ ಮನವಿ ಕೊಟ್ಟರು ಇವರ ಕೂಗು ಸಂಬಂಧ ಪಟ್ಟವರಿಗೆ ತಲುಪುತ್ತಲೆ ಇಲ್ಲ.

300x250 AD

ತಡೆ ಇಲ್ಲದ ಅಕ್ರಮ ದಂಧೆ :
ಮರಳುಗಾರಿಕೆ ಹೊರತಾಗಿ ಇನ್ನುಳಿದ ಅಕ್ರಮ ಉದ್ಯೋಗ ರಾಜಾರೋಷವಾಗಿ ನಡೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಸರಾಯಿ ವ್ಯಾಪಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುಡ್ಡ ಬೆಟ್ಟದ ಮೇಲಲ್ಲ ಎಲೆ ಮಾನವರ ಬಿಂದಾಸ್ ವ್ಯವಹಾರ ಜೋರಾಗಿದೆ. ಹಲವು ವರ್ಷದಿಂದ ಸದ್ದು ಮಾಡದ ಗುಡುಗುಡಿ ಗುಂಡು ಡಣ ಡಣ ಅನ್ನುತ್ತಿದೆ. ಇಷ್ಟೆಲ್ಲ ವ್ಯವಹಾರ ಎಗ್ಗಿಲ್ಲದೇ ನಡೆಯುತ್ತಿದ್ದು,ಈ ಎಲ್ಲಾ ದಂಧೆಗೆ ಪರ್ಮಿಷನ್ ಸಿಕ್ಕಿದೆ ಎಂದು ಊರೆಲ್ಲ ಗುಲ್ಲು ಹಬ್ಬಿಕೊಂಡಿದೆ. ಹಾಗಾದರೆ ಇದಕ್ಕೆಲ್ಲ ಪರ್ಮಿಷನ್ ಎಲ್ಲಿ ಸಿಗುತ್ತದೆ, ಕೊಡುವವರು ಯಾರು ಎನ್ನುವ ಪ್ರಶ್ನೆ ಏನು ಅರಿಯದವರನ್ನು ಕಾಡುತ್ತಿದೆ, ಅನ್ನುವುದು ಬಿಟ್ಟರೆ ಉದ್ಯೋಗ ಮಾತ್ರ ಸಲೀಸಾಗಿ ನಡೆದಿದೆ. ಮರಳಿಗೆ ತಡೆ ಒಡ್ಡಿದಂತೆ ಈ ಅಕ್ರಮಕ್ಕೂ ಅಧಿಕಾರಿಗಳ ಬಿಸಿ ಮುಟ್ಟುವುದೇ ಎಂದು ಕಾದು ನೋಡಬೇಕಿದೆ.

ಪ್ರಧಾನಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ :
ಅಕ್ರಮ ಮರಳು ದಂದೆಯಿಂದ ರೋಷಿಹೋಗಿದ್ದ ಕೆಲವರು ಸದ್ಯದ ಮಟ್ಟಿಗೆ ಬಂದಾಗಿದೆ, ಮುಂದೆ ಕೂಡ ಸಂಪೂರ್ಣ ಬಂದಾಗ ಬೇಕು, ಪರವಾನಿಗೆದಾರರಿಗೆ ಕಾನೂನು ತೊಡಕಿನಿಂದ ಅವಕಾಶ ಕೊಡದೆ, ಅಕ್ರಮಕ್ಕೆ ಕೊಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಂದಾಗಿರುವ ಅಕ್ರಮ ಉದ್ಯೋಗ ಮತ್ತೆ ಪ್ರಾರಂಭ ಗೊಂಡರೆ ಸೂಕ್ತ ದಾಖಲೆಯೊಂದಿಗೆ ಪ್ರಧಾನ ಮಂತ್ರಿಯವರಿಗೆ ಮತ್ತು ರಾಷ್ಟ್ರಪತಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸುತ್ತೇವೆ ಎಂದು ಹೆಸರು ಹೇಳಲು ಇಚ್ಚಿಸದ ನದಿ ತೀರದ ನಿವಾಸಿ ಒಬ್ಬರು ತಿಳಿಸಿದ್ದಾರೆ.

ಮರಳು ಗಾಡಿ ಶಾಸಕರು ತಡೆದರು ಬಂದಾಗಿರಲಿಲ್ಲ :

ಕುಮಟಾ ಶಾಸಕ ದಿನಕರ ಶೆಟ್ಟಿ ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ತುಂಬಿದ ವಾಹನವನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿದರು ಕೂಡ ಅಕ್ರಮ ಮರಳು ದಂದೆ ಮಾತ್ರ ನಿಂತಿರಲಿಲ್ಲ. ಶಾಸಕರೇ ಅಖಾಡಕ್ಕೆ ಇಳಿದು ವಾಹನ ತಡೆದರು, ಉದ್ಯಮದ ಮೇಲೆ ಯಾವ ಪರಿಣಾಮವು ಬಿದ್ದಿರಲಿಲ್ಲ. ಅಷ್ಟರ ಮಟ್ಟಿಗೆ ಅಕ್ರಮ ಮರಳು ದಂದೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ ಕೊಂಡಿತ್ತು. ಅನಾವಶ್ಯಕವಾಗಿ ಬಡ, ಮಧ್ಯಮ ವರ್ಗದವರ ಜೀವ ಹೋಗುತ್ತಿತ್ತು, ಇದೀಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಅಪಘಾತ ನಡೆದ ಸ್ಥಳಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

Share This
300x250 AD
300x250 AD
300x250 AD
Back to top