ಶಿರಸಿ: ತಾಲೂಕಿನ ಸಹಸ್ರಲಿಂಗ ಸಮೀಪದ ದೊಡ್ಡಬೈಲು ಬಳಿ ಈಜಾಡಲು ಹೋಗಿದ್ದ ಶಿರಸಿ ಕಸ್ತೂರಬಾ ನಗರ ಹಾಗು ರಾಮನಬೈಲಿನ ಐದು ಯುವಕರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಕಾಣೆಯಾದವರ ಮೃತ ದೇಹ ಇದುವರೆಗೂ ಪತ್ತೆಯಾಗಿಲ್ಲ. ಪೋಲಿಸರು ಹಾಗು ಅಗ್ನಿಶಾಮಕ ದಳದವರು ದೇಹ ಹುಡುಕಲು ಹರಸಾಹಸ ಪಡುತ್ತಿದ್ದಾರೆ. ಇದು ಶಿರಸಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತೀ ದೊಡ್ಡ ದುರ್ಘಟನೆಯಾಗಿದೆ.
ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44),ರಾಮನಬೈಲಿನ ಶ್ರೀಮತಿ ನಾದಿಯಾ ನೂರ್ ಅಹಮದ್ ಶೇಖ್ (20),ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಬಾ ತಬಸುಮ್ (21),ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್(22) ಹಾಗು ರಾಮನಬೈಲಿನ ವಿದ್ಯಾರ್ಥಿ ಉಮರ್ ಸಿದ್ದಿಕ್ ನೀರಿನಲ್ಲಿ ಕಾಣೆಯಾದವರು ಎಂದು ತಿಳಿದುಬಂದಿದೆ.