Slide
Slide
Slide
previous arrow
next arrow

ಜನತೆಗೆ ಶಾಪಗ್ರಸ್ತವಾಯಿತೇ ಅಕ್ರಮ ಮರಳುಗಾರಿಕೆ..!

300x250 AD

ಹೊನ್ನಾವರ: ತಾಲೂಕಿಗೆ ಅಂಟಿದ ಅಕ್ರಮ ಮರಳುಗಾರಿಕೆಯ ಕೊಳೆ ತೊಳೆಯುವವರು ಯಾರು ಎನ್ನುವ ಪ್ರಶ್ನೆ ತಾಲೂಕಿನ ಬಡ ಕೂಲಿಕಾರರ ಕುಟುಂಬದಲ್ಲಿ ಕೇಳಿ ಬರುತ್ತಿದೆ. ಅಲ್ಪಾವದಿಯ ದುಡಿತಕ್ಕೆ ಆಕರ್ಷಿತರಾಗುತ್ತಿರುವ ಯುವ ಸಮುದಾಯ ರಾತ್ರಿ ವೇಳೆ ಮರಳು ಸಾಗಾಟಕ್ಕೆ ಸಂಬಂಧಪಟ್ಟ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಆದರೆ ಇದು ಇತ್ತೀಚಿಗೆ ಸಾವು ನೋವಿನ ಕೂಪವಾಗಿ ಮಾರ್ಪಡುಗೊಳ್ಳುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ.

ಶರಾವತಿ ನದಿಯ ಉದ್ದಗಲಕ್ಕೂ ಅಕ್ರಮ ಮರಳುಗಾರಿಕೆ ಅಧಿಕೃತ ಅನುಮತಿ ಕೊಟ್ಟಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ರಾತ್ರಿ ಸಮಯದಲ್ಲಿ ಮರಳು ಸಾಗಾಟ ಮಾಡುತ್ತಿದ್ದರು. ಈಗ ಕಾಲ ಬದಲಾಗಿ ಮರಳು ಸಾಗಾಟ ಮಾಡುವವರಿಗೆ ಹಗಲು ರಾತ್ರಿ ಒಂದೇ ಆಗಿ ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಹಿಡಿದು ಗ್ರಾಮೀಣ ಪ್ರದೇಶದ ರಸ್ತೆಯಲ್ಲಿ ಇವರ ಸಂಚಾರ ಜಾಸ್ತಿಯಾಗಿದೆ. ಜಿಲ್ಲೆಯಿಂದ ಹೊರ ಜಿಲ್ಲೆಗೂ ಸಹ ದೊಡ್ಡ ದೊಡ್ಡ ವಾಹನದಲ್ಲಿ ಮರಳು ತುಂಬಿ ಸಾಗಾಟ ಮಾಡುತ್ತಿವೆ

ಮರಳಿಗಂಟಿದ ನೆತ್ತರ ಕಲೆ; ಇನ್ನೆಷ್ಟು ಬಲಿ ಬೇಕು ?
ಅಕ್ರಮ ಮರಳ ಸಾಗಾಟ ಸುಸೂತ್ರವಾಗಿ ಏನು ನಡೆಯುತ್ತಿಲ್ಲ. ಇತ್ತೀಚಿನ ವರ್ಷದಲ್ಲಿ ಈ ಉದ್ಯಮಕ್ಕೆ ಸಾಕಷ್ಟು ರಕ್ತದ ಕಲೆ ಅಂಟಿಕೊಂಡಿದೆ. ಸಾವು ನೋವು, ಹೊಡೆದಾಟ, ಬಡಿದಾಟ ನಿರಂತರ ಎನ್ನುವಂತಾಗಿದೆ. ಒಂದೆರಡು ವರ್ಷದ ಹಿಂದೆ ಹೊನ್ನಾವರ ಪಟ್ಟಣದ ಹೆದ್ದಾರಿಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡವ ಮರಳು ಟಿಪ್ಪರ ಲಾರಿ ಹರಿದು ಮಲಗಿದ್ದಲ್ಲೇ ಹೆಣವಾಗಿದ್ದ. ಕವಲಕ್ಕಿಯಲ್ಲಿ ಮರಳು ತುಂಬಿದ್ದ ಬುಲೆರೋ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಗಂಭೀರ ಗಾಯ ಗೊಂಡಿದ್ದ. ಇತ್ತೀಚಿಗೆ ಪ್ರಭಾತ ನಗರದಲ್ಲಿ ಟಿಪ್ಪರ್ ಬಡಿದು ಕರಿಕುರ್ವ ಯುವಕನೊಬ್ಬ ಮೃತನಾಗಿದ್ದ. ಅದು ಕೂಡ ಮರಳು ತುಂಬಿದ್ದ ವಾಹನ ಎಂದು ಚರ್ಚೆ ಆಗಿತ್ತು. ಕೆಲವು ದಿನದ ಹಿಂದೆ ಹಣ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ನಡೆದ ಜಗಳ ವಿಕೋಪಕ್ಕೆ ಹೋಗಿ ಟಿಪ್ಪರ್ ಹಾಯಿಸಿ ಒಬ್ಬನನ್ನು ಕೊಲೆ ಮಾಡಲಾಗಿತ್ತು. ಮತ್ತಿಬ್ಬರು ಆಸ್ಪತ್ರೆ ಸೇರಿದ್ದರು. ಆರೋಪಿ ಜೈಲಿನಲ್ಲೆ ಇದ್ದಾರೆ.

ಕೆಲವು ದಿನದ ಹಿಂದೆ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮರಳು ವಾಹನ ಹಿಡಿಸಿ ಕೊಟ್ಟಿದ್ದಾನೆ ಎಂದು ಚಾಕು ಇರಿದು, ಜೀವ ಬೆದರಿಕೆ ಹಾಕಿರುವ ಬಗ್ಗೆ ದೂರು ದಾಖಲಾಗಿತ್ತು. ಬಿಹಾರಿ ಕಾರ್ಮಿನೊಬ್ಬ ಸ್ಥಳೀಯ ಮಹಿಳೆಯೊಬ್ಬರನ್ನು ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆಯು ನಡೆದಿತ್ತು. ಇದೀಗ ಕರಿಕುರ್ವದಲ್ಲಿ ಕಾಲೇಜು ವಿದ್ಯಾರ್ಥಿ ಒಬ್ಬ ಸಾವು ಕಂಡಿದ್ದಾನೆ. ಈ ಅಕ್ರಮ ದಂದೆಗೆ ಇನ್ನೆಷ್ಟು ಬಲಿ ಬೇಕು ಎಂದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಹಸೀಲ್ದಾರ್ ಗಮನ ಕೊಡಲಿ :
ತಾಲೂಕಿನಲ್ಲಿ ಇಷ್ಟೆಲ್ಲ ಬೆಳವಣ ಗೆ ನಡೆಯುತ್ತಿದ್ದರೂ ಕಂಡು ಕಾಣದಂತೆ ಇರುವ ತಾಲೂಕಾ ದಂಡಾಧಿಕಾರಿಗಳು ಅಕ್ರಮ ದಂದೆಗೆ ಕಡಿವಾಣ ಹಾಕಬೇಕಿದೆ ಎಂಬುದು ಜನರ ಅಭಿಪ್ರಾಯವಾಗಿದೆ. ನದಿಯ ಉದ್ದಗಲಕ್ಕೂ ಹಬ್ಬಿರುವ ಮರಳು ದಿಬ್ಬ, ನದಿಯಲ್ಲಿ ಮರಳು ದೋಣ ಯ ಅಬ್ಬರ, ರಸ್ತೆಯಲ್ಲಿ ಮರಳು ವಾಹನಗಳ ಓಡಾಟ ಇದೆಲ್ಲವೂ ಕಾಣುವುದೇ ಇಲ್ಲವೇ ಎನ್ನುವ ಪ್ರಶ್ನೆ ಜನ ಸಾಮಾನ್ಯರಲ್ಲಿ ಹುಟ್ಟಿಕೊಂಡಿದೆ. ತಹಸೀಲ್ದಾರ್ ಕಚೇರಿ ಎದುರಿನಲ್ಲಿ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮರಳು ವಾಹನ ಹಗಲಿನಲ್ಲೇ ಓಡಾಡುತ್ತಿದೆ. ರಾತ್ರಿಯಾದ ಮೇಲೆ ಮರಳು ಸಾಗಾಟದ ವಾಹನ ಕಾಯಲು ಅಲ್ಲಲ್ಲಿ ಗುಂಪು ಗುಂಪಾಗಿ ಜನ ನಿಂತಿರುತ್ತಾರೆ. ಎಲ್ಲವು ಕಣ್ಣ ಮುಂದೆ ಇದ್ದರೂ ಏನು ಕಾಣದಂತೆ ಇರುವ ಆಡಳಿತ ವ್ಯವಸ್ಥೆಗೆ ಏನ್ನೆನ್ನಬೇಕು ಎನ್ನುವುದು ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ. ಇನ್ನಾದರೂ ತಾಲೂಕಾ ದಂಡಾಧಿಕಾರಿಗಳು ಕಾರ್ಯಾಚರಣೆಗೆ ಇಳಿಯುತ್ತಾರಾ ಎಂದು ಕಾದು ನೋಡಬೇಕಿದೆ.

ಬೈಕ್ ಸವಾರರಿಗೂ ರಿಯಾಯಿತಿ ನೀಡಲಿ :
ತಮ್ಮ ಕೆಲಸಕಾರ್ಯಕ್ಕೆ ಬೈಕ್ ಮೇಲೆ ಓಡಾಡುವ ಸವಾರರಿಗೆ ಆಗಾಗ ಕಾನೂನಿನ ಬಿಸಿ ತಟ್ಟುತ್ತಿವೆ. ಹೆಲ್ಮೆಟ್ ಇಲ್ಲ, ಲೈಸೆನ್ಸ್ ಇಲ್ಲ, ದಾಖಲೆ ಸರಿ ಇಲ್ಲ ಎಂದು ತಡೆದು ದಂಡ ಹಾಕುತ್ತಾರೆ. ಅಕ್ರಮ ಮರಳು ಸಾಗಾಟಕ್ಕೆ ಇಲ್ಲದ ನಿಯಮ ಬೈಕ್ ಸವಾರರಿಗೆ ಯಾಕೆ ಅನ್ವಯವಾಗುತ್ತಿದೆ. ಮರಳು ವಾಹನ ಬೇಕಾಬಿಟ್ಟಿರುವ ಹಾಗೆ ಬೈಕ್ ಸವಾರರನ್ನು ಬಿಡಿ ಎನ್ನುವ ಚರ್ಚೆ ಅಧಿಕಾರಿಗಳ ನಡವಳಿಕೆಯಿಂದ ಹುಟ್ಟುವಂತಾಗಿದೆ. ಬಡ, ಮಧ್ಯಮ ವರ್ಗದ ಬೈಕ್ ಸವಾರರನ್ನು ಕಾಡುವ ಬದಲು, ಮರಳು ವಾಹನಕ್ಕೆ ಇರುವ ನಿಯಮವನ್ನೇ ಒದಗಿಸಿ ಕೊಡಿ ಎನ್ನುವ ಬೇಡಿಕೆ ಕೂಡ ಹುಟ್ಟಿಕೊಳ್ಳುವ ಸಾಧ್ಯತೆಯಿದೆ.
ಮರಳಿನ ಸೈಟ್ ನಲ್ಲಿ ಮರಳನ್ನು ಲಾರಿಗೆ ತುಂಬುವ ಕೆಲಸಕ್ಕೆಂದು ಹೋದ ಕಾಲೇಜ್ ವಿದ್ಯಾರ್ಥಿ ಮರಳು ಲಾರಿ ಹಾಯ್ದು ಮೃತಪಟ್ಟ ಘಟನೆ ಕರಿಕುರ್ವಾ ಶರಾವತಿ ನದಿತೀರದ ಮರಳು ಸೈಟ್ ನಲ್ಲಿ ಜರುಗಿದೆ. ಮೃತಪಟ್ಟ ವಿದ್ಯಾರ್ಥಿ ದರ್ಶನ ಸುಬ್ರಾಯ ಗೌಡ (19)ಬಾನಗದ್ದೆ ಹಡಿನಬಾಳದ ನಿವಾಸಿಯಾಗಿದ್ದಾನೆ.

ಈತ ತನ್ನ ಗೆಳೆಯರೊಂದಿಗೆ ತಾಲೂಕಿನ ಕರಿಕುರ್ವಾ ಶರಾವತಿ ನದಿ ದಂಡೆಯಲ್ಲಿರುವ ಮಂಜುನಾಥ ನಾರಾಯಣ ಗೌಡ ಇವರ ಮರಳಿನ ಸೈಟ್ ನಲ್ಲಿ ಮರಳುನ್ನು ಲಾರಿಗೆ ತುಂಬುವ ಕೆಲಸಕ್ಕೆ ದರ್ಶನ ಸುಬ್ರಾಯ ಗೌಡ, ಸಚಿನ್, ಜಯಂತ ಕನ್ಯಾ ಗೌಡ,ರಾಘವ ಮರಿ ಗೌಡ, ಸೇರಿ ಹೋಗಿದ್ದರು. ಕೆಲಸಕ್ಕೆ ಹೋಗಿದ್ದ ಮರಳು ಸೈಟ್ ಗೆ ಬಂದ ಎರಡು ಲಾರಿಗಳಿಗೆ ಮರಳು ತುಂಬಿದ ಮೇಲೆ ಸಚಿನ್, ಇನ್ನಿತರರು ಸನಿಹದಲ್ಲಿರುವ ಕಟ್ಟೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಮೃತ ದರ್ಶನ ಅಲ್ಲೇ ಪೋನ್ ನಲ್ಲಿ ಮಾತನಾಡುತ್ತಿದ್ದ. ರಾತ್ರಿ 10.15 ರ ಸುಮಾರಿಗೆ ಟಿಪ್ಪರ್ ಚಲಾಯಿಸಿಕೊಂಡು ಬಂದ ಚಾಲಕ ಮಾರುತಿ ಗೌಡ ಸೈಟ್ ಒಳಗೆ ವೇಗವಾಗಿ ಬಂದು ಪೋನ್ ನಲ್ಲಿ ಮಾತನಾಡುತ್ತಿದ್ದ ದರ್ಶನನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಲಾರಿ ಮುಂದಕ್ಕೆ ಚಲಿಸಿ ನಿಲ್ಲಿಸಿದನು. ಕೂಡಲೆ ತನ್ನ ಜೊತೆಯಲ್ಲಿದ್ದ ಗೆಳೆಯರು ಸೇರಿ ಉಪಚರಿಸಿದ್ದು ದರ್ಶನನಿಗೆ ತಲೆ, ಎಡಗಾಲಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮತೃಪಟ್ಟನು ಎನ್ನಲಾಗಿದೆ.

300x250 AD

ಅಪಘಾತ ಪಡಿಸಿದ ಟಿಪ್ಪರ್ ಕೆ.ಎ-19/ಎ.ಡಿ5898 ಇದರ ಚಾಲಕ ಅರೋಪಿ ಮಾರುತಿ ಗೌಡ ಕೇರಿಮನೆ,ಮಾವಿನಕುರ್ವಾ ಎಂದು ತಿಳಿಯಲಾಗಿದೆ. ಇತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿನ ಮಾದೇವ ಗೌಡ ಮರಬಳ್ಳಿ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೋಲಿಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಸಹಪಾಠಿಗಳಿಂದ ಕಂಬನಿ :
ಮರಳು ಟಿಪ್ಪರ್ ಹಾಯಿಸಿದ ಅಫಘಾತದಲ್ಲಿ ತುತ್ತಾಗಿರುವರೆನ್ನಲಾದ ಅಳ್ಳಂಕಿ ಪದವಿ ಪೂರ್ವ ಕಾಲೇಜಿನ ವಾಣ ಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ದರ್ಶನ ಗೌಡ ಈತನ ಅಕಾಲಿಕ ಮರಣದ ಸುದ್ದಿ ತಿಳಿದ ಅಳ್ಳಂಕಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ ಬಳಗ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರು ತುರ್ತು ಸಭೆ ಸೇರಿ ಮೌನವ್ರತ ಆಚರಿಸಿ ಅಗಲಿದ ವಿದ್ಯಾರ್ಥಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಚಂದ್ರಕಾಂತ ಕೊಚರೇಕರ, ಪ್ರಾಂಶುಪಾಲ ಡಾ. ಜಿ. ಎಸ್. ಹೆಗ್ಡೆ, ಹಿರಿಯ ಉಪನ್ಯಾಸಕರಾದ ಕಿಶೋರ್ ನಾಯ್ಕ, ಹರಿಶ್ಚಂದ್ರ ಮೇಸ್ತ ಮತ್ತಿತರರು ಉಪಸ್ಥಿತರಿದ್ದರು.

ಅಗಲಿದ ವಿದ್ಯಾರ್ಥಿ ದರ್ಶನ ಗೌಡ ಕಾಲೇಜಿಗೆ ಆದರ್ಶಪ್ರಾಯವಾಗಿದ್ದ. ಬಿಡುವಿನ ವೇಳೆಯಲ್ಲಿ ಕೂಲಿ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದ. ಏಕೈಕ ಗಂಡು ಮಗನನ್ನು ಕುಟುಂಬ ಕಳೆದುಕೊಂಡು ಅನಾಥವಾಗಿದೆ. ವಿದ್ಯಾರ್ಥಿ ದರ್ಶನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ವಿದ್ಯಾರ್ಥಿಯ ಅವಲಂಬಿತರಿಗೆ ಸೂಕ್ತ ಪರಿಹಾರ ಸಿಗಬೇಕು. ಶರಾವತಿ ನದಿಯಲ್ಲಿನ ಅಕ್ರಮ ಮರಳು ಗಣ ಗಾರಿಕೆ ತಕ್ಷಣದಿಂದ ನಿಲ್ಲಿಸಬೇಕು. ನದಿ ತೀರಗಳಲ್ಲಿ ಅಕ್ರಮ ಮರಳು ಗಣ ಗಾರಿಕೆಯಲ್ಲಿ ತೊಡಗಿಕೊಂಡಿರುವ ಹೊರ ರಾಜ್ಯದ ಕಾರ್ಮಿಕರನ್ನು ಗುರುತಿಸಿ ಅವರವರ ರಾಜ್ಯಗಳಿಗೆ ಮರಳಿಕಳಿಸುವ ಕೆಲಸ ತಾಲ್ಲೂಕು ಆಡಳಿತ ಮಾಡಬೇಕು ಎನ್ನುವ ಕೂಗು ತಾಲ್ಲೂಕಿನ ಎಲ್ಲೆಡೆಯಿಂದ ಕೇಳಿ ಬಂದಿದೆ.

ಅಲ್ಪಾವದಿ ದುಡಿತಕ್ಕೆ ಜೀವತೆತ್ತ ಕಾಲೇಜು ವಿದ್ಯಾರ್ಥಿ :
ಅಪಘಾತದಲ್ಲಿ ಮೃತಪಟ್ಟ ಬಾಲಕ ಹಡಿನಬಾಳದ ಬಾನಗದ್ದೆ ನಿವಾಸಿ. ಅಳ್ಳಂಕಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದರ್ಶನ್ ಪಾಲಕರಿಗೆ ಒಬ್ಬನೇ ಮಗ. ಅಪ್ಪ-ಅಮ್ಮ ಸಹೋದರಿಯೊಟ್ಟಿಗೆ ವಾಸವಾಗಿದ್ದ ಈತ ನಿತ್ಯದ ಖರ್ಚಿಗೆಂದು ಗೆಳೆಯರೊಟ್ಟಿಗೆ ಮರಳು ಲಾರಿಗೆ ತುಂಬಲು ಹೋಗುತ್ತಿದ್ದ. ಆದರೆ ಜೀವನ ಅವನು ಅಂದುಕೊಂಡಂತೆ ಆಗಲಿಲ್ಲ. ತಾನು ಕೆಲಸ ಮಾಡಿದ ಅಲ್ಪ ಸ್ವಲ್ಪ ಹಣ ನಿತ್ಯದ ಖರ್ಚಿಗೆ ಆಗಬಹುದು ಎಂದುಕೊಂಡರೆ, ವಿಧಿ ಬೇರೆಯೇ ಬರೆದಿತ್ತು. ಟಿಪ್ಪರ್ ಚಾಲಕನ ಅಚಾತುರ್ಯಕ್ಕೆ ದರ್ಶನ್ ಬಲಿಯಾಗಿದ್ದಾನೆ. ಇದ್ದೊಬ್ಬ ಮಗನನ್ನು ಕಳೆದುಕೊಂಡು ತಂದೆ-ತಾಯಿ ಸಹೋದರಿಯ ಕಣ್ಣೀರಿನ ಗೋಳು ಮುಗಿಲು ಮುಟ್ಟಿದೆ. ಯಾರದೋ ಅಚಾತುರ್ಯಕ್ಕೆ ಒಂದು ಕುಟುಂಬದ ವಾರಸುದಾರನನ್ನು ಕಳೆದುಕೊಂಡಿದೆ.

ಮಾಫಿಯಾಗೆ ತಡೆ ಒಡ್ದುವವರು ಯಾರು..?

ಅಕ್ರಮ ಮರಳು ದಂದೆಯು ಮಾಫಿಯಾ ಗ್ಯಾಂಗ್ ನಂತಾಗಿದ್ದು, ಅವರ ಬಿಗಿ ಹಿಡಿತಕ್ಕೆ ತಾಲೂಕು ತಲ್ಲಣಗೊಳ್ಳುವಷ್ಟರ ಮಟ್ಟಿಗೆ ವಿಸ್ತರಣೆಗೊಂಡಿದೆ. ಅಕ್ರಮ ಮರಳುಗಾರಿಕೆಯಿಂದ ಮತ್ತೆಷ್ಟು ಬಲಿ ಬೇಕು ಎನ್ನುವ ಪ್ರಶ್ನೆ ಹುಟ್ಟಿವಂತಾಗಿದೆ. ಈ ಎಲ್ಲಾ ಅಕ್ರಮ ತಡೆಗೆ ಬೇಲಿ ಹಾಕುವವರು ಯಾರು ? ಇಷ್ಟು ವರ್ಷ ಇಲ್ಲದ ಅವಾಂತರ ಈಗ ಹೇಗೆ ಪ್ರಾರಂಭಗೊಂಡಿದೆ. ಅಧಿಕಾರಿಗಳು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರ ಹಿಂದಿರುವ ಉದ್ದೇಶವೇನು ? ಹಿರಿಯ ಅಧಿಕಾರಿಗಳಿಕ್ಕಿಂತ ಕೆಲವು ಕಿರಿಯ ಅಧಿಕಾರಿಗಳ ಅಬ್ಬರ ಜಾಸ್ತಿ ಆಗುತ್ತಿದೆಯೇ ಎನ್ನುವ ಗುಮಾನಿ ಹುಟ್ಟಿಕೊಂಡಿದೆ. ಕಿರಿಯ ಅಧಿಕಾರಿಯಾದರೂ ಕೂಡ ಹಿರಿಯ ಅಧಿಕಾರಿಗಳ ಒಡನಾಟ, ಪ್ರಮುಖ ರಾಜಕೀಯ ಮುಖಂಡರ ನಡುವೆ ಇರುವ ಬಾಂಧವ್ಯ ಈ ಎಲ್ಲಾ ಬೆಳವಣ ಗೆಗೆ ಕಾರಣವೆ ? ಜೀವ ಹೋಗಿ ಹೆಣ ಬಿದ್ದುಕೊಂಡಿದ್ದರು ಅಕ್ರಮ ದಂದೆ ಮಾತ್ರ ನಿಲ್ಲುತ್ತಿಲ್ಲ. ಅಷ್ಟರ ಮಟ್ಟಿಗೆ ವ್ಯವಸ್ಥೆ ತನ್ನ ಹಿಡಿತ ಕಳೆದುಕೊಂಡು ಬಿಟ್ಟಿದೆ ಎಂದರೆ ಸುಳ್ಳಾಗಲಾರದು.

Share This
300x250 AD
300x250 AD
300x250 AD
Back to top