Slide
Slide
Slide
previous arrow
next arrow

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸುಬೇದಾರ್ ರಾಮು ಕರೆ

300x250 AD

ಶಿರಸಿ: ಇಂದಿನ ಯುವಕರೇ ನಾಳೆಗೆ ಬಲಿಷ್ಠ ರಾಷ್ಟ್ರವನ್ನು ಕಟ್ಟುವವರು ಹಾಗಾಗಿ ಯುವಜನತೆಯು ತಮ್ಮ ದಿನನಿತ್ಯದ ಜೀವನದಲ್ಲಿ ಶಿಸ್ತು ಸಂಯಮವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ನಿವೃತ್ತ ಸೈನಿಕ ಸುಬೇದಾರ್ ರಾಮು ಹೇಳಿದರು.

ಅವರು ಎಂಇಎಸ್ ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಕಾಲೇಜಿನ ಎನ್.ಸಿ.ಸಿ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಂಗ್ಲಾ ವಿಮೋಚನಾ ಸಂಭ್ರಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಬಹಳಷ್ಟು ಜನ ಸೇನೆಗೆ ಸೇರಲು ಹೆದರುತ್ತಾರೆ. ಮನೆಯವರು ಮಕ್ಕಳನ್ನು ಸೇನೆಗೆ ಸೇರಲು ಪ್ರೋತ್ಸಾಹಿಸುವುದನ್ನು ಬಿಟ್ಟು ಸೇನೆಗೆ ಸೇರದಿರಲು ಒತ್ತಾಯಿಸುತ್ತಾರೆ. ಆದರೆ ಹಾಗಾಗಬಾರದು. ಇಂದು ಭೂಸೇನೆ, ವಾಯು ಸೇನೆ, ನೌಕಾ ಸೇನೆ ಹೀಗೆ ಮೂರು ರಕ್ಷಣಾ ವ್ಯವಸ್ಥೆಯಲ್ಲಿ ಉತ್ತಮ ಉದ್ಯೋಗದ ಆಯ್ಕೆ ಅವಕಾಶ ನಮಗೆ ಇದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು

ವಾಯು ಸೇನೆಯ ನಿವೃತ್ತ ಸೇನಾಧಿಕಾರಿ ಎಸ್ ಜಿ ಭಟ್ ಮಾತನಾಡಿ ದೇಶದ ಸಾಮಾನ್ಯ ನಾಗರಿಕರ ಹಾಗೆ ಒಬ್ಬ ಸೈನಿಕರ ಜೀವನ ಸುಲಭವಲ್ಲ. ಸೇನೆಗೆ ಸೇರಿದ ಮಾತ್ರಕ್ಕೆ ಯುದ್ಧಗಳನ್ನು ಎದುರಿಸದೇ ಇರುವ ಪರಿಸ್ಥಿತಿಯೂ ಕೂಡ ಬರಬಹುದು. ಆದರೆ ಒಬ್ಬ ಸೈನಿಕನಾದವನು ಯುದ್ಧಕ್ಕೆ ಪ್ರತಿ ಕ್ಷಣವೂ ಕೂಡ ಸಿದ್ದನಾಗಿ ಇರಬೇಕು. ಇವತ್ತು ನಮ್ಮ ಭಾರತ ಸರ್ಕಾರ ಯುವ ಜನತೆಗೆ ಸೇನೆಯಲ್ಲಿ ಸೇರಲು ಅನೇಕ ಅವಕಾಶಗಳನ್ನು ನೀಡಿದೆ. ಇವುಗಳನ್ನು ಯುವ ಜನತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎನ್.ಸಿ.ಸಿ ಹಾಗೂ ಭಾರತೀಯ ಸೇನೆ ಇವು ನಮ್ಮಲ್ಲಿ ಶಿಸ್ತು ಸಂಯತೆ ಯನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.

300x250 AD

ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಸ್. ಹಳೆಮನೆ ಮಾತನಾಡಿ ಭಾರತ ಶಾಂತಿಪ್ರಿಯ ರಾಷ್ಟ್ರ. ನಾವಾಗಿಯೇ ಯಾವ ರಾಷ್ಟ್ರದ ಮೇಲೂ ಕೂಡ ಯುದ್ಧವನ್ನು ಮಾಡಿಲ್ಲ. ಆದರೆ ಅನ್ಯ ರಾಷ್ಟ್ರದವರು ನಮ್ಮ ಮೇಲೆ ದಾಳಿ ಮಾಡಿದಾಗ ಅವರನ್ನು ಬಿಡುವ ಜಾಯಮಾನ ನಮ್ಮದಲ್ಲ. ನಾವು ಇವತ್ತು ಐಶ್ವರ್ಯದ ಜೀವನವನ್ನು ನಡಿಸುತ್ತಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ದೇಶದ ಸೈನಿಕರು. ಇಲ್ಲಿ ನೂರು ರೂಪಾಯಿಗೆ ಸಿಗುವ ಪೆಟ್ರೋಲ್ ನೆರೆಯ ರಾಷ್ಟ್ರದಲ್ಲಿ 400 ರಿಂದ 500 ರೂಪಾಯಿ ಇದೆ. ಹಾಗೆ ಇವತ್ತು ನಮ್ಮ ದೇಶದ ರಾಷ್ಟ್ರಪತಿಯಿಂದ ಹಿಡಿದು ಭೂಸೇನೆ, ನೌಕಾ ಸೇನೆ, ವಾಯುಸೇನೆ ಹೀಗೆ ಎಲ್ಲಾ ವಿಭಾಗದಲ್ಲೂ ಕೂಡ ಮಹಿಳೆಯರು ಕೂಡ ತಮ್ಮ ಚಾಪನ್ನು ಮೂಡಿಸಿರುವುದನ್ನು ಕಾಣಬಹುದು ಎಂದು ಹೇಳಿದರು.

ಎನ್.ಸಿ.ಸಿ ಅಧಿಕಾರಿ ಅಶ್ವತ್ ಹೆಗಡೆ ಹಾಗೂ ನಿವೃತ್ತ ಪ್ರೊಫೆಸರ್ ನರಸಿಂಹ ಮೂರ್ತಿ ಉಪಸ್ಥಿತರಿದ್ದರು. ಸುಮಂತ್ ಸ್ವಾಗತಿಸಿದರು. ಲಿಖಿತ್ ನಿರೂಪಿಸಿ ವಂದಿಸಿದರು.

Share This
300x250 AD
300x250 AD
300x250 AD
Back to top