ಕಾರವಾರ: ಬಂದ್ ಆಗಿರುವ ಕಂಪನಿಯ ಹೆಸರಿನಲ್ಲಿ ಹಣ ಪಡೆದು ಮಹಾರಾಷ್ಟ ಕೊಲ್ಲಾಪುರದ ಯುವಕನೊಬ್ಬ ತನ್ನ ತಮ್ಮನಿಗೆ ಮೋಸ ಮಾಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮವಾಗಬೇಕು ಎಂದು ಆಶಿಶ್ ಕ್ರಾಸ್ಟಾ ಆಗ್ರಹಿಸಿದರು.
ಅವರು ನಗರದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದರು. ಪ್ರಸಾದ ಪರಶುರಾಮ ಸೊನ್ಕೆ ಮೋಸ ಮಾಡಿದವನಾಗಿದ್ದಾನೆ. ತನ್ನ ಸಹೋದರ ಸಂಜಯ ಅವರು ಉದ್ಯಮಿಯಾಗಿದ್ದು, ಆಗಾಗ ಅವರ ಆಫಿಸಿಗೆ ಬಂದು ಹೋಗುತ್ತಿದ್ದ ಈತ ಮಹಾರಾಷ್ಟ್ರದಲ್ಲಿ ಇರುವ ಫಾರೆಕ್ಸ್ ಹೆಲ್ತ್ ಸಲ್ಯೂಶನ್ ಕಂಪನಿಯಲ್ಲಿ ಹಣ ಹೂಡಿದರೆ ಲಾಭ ಬರುತ್ತದೆ ಎಂದು ನಂಬಿಸಿ ಅಲ್ಲಿಗೆ ಕರೆದುಕೊಂಡು ಹೋಗಿ ಒಟ್ಟು 51 ಲಕ್ಷ ರೂಪಾಯಿ ಹೂಡಿಕೆ ಮಾಡಿಸಿದ್ದಾನೆ. ಬಳಿಕ ಬಡ್ಡಿ ಇರಲಿ, ಅಸಲೂ ಬಂದಿಲ್ಲ ಎಂದು ಹೇಳಿದರು.
ಪ್ರಸಾದ ಹಾಗೂ ಅವರ ಕುಟುಂಬದವರು ಕೊಲ್ಲಾಪುರ, ಹಳಿಯಾಳ ಭಾಗದಲ್ಲಿ ಪರಿಚಿತರಿರುವರ ಬಳಿಯೆಲ್ಲಾ ಹಣ ಹೂಡಿಕೆ ಮಾಡಿಸಿದ ಅನುಮಾನವಿದೆ. ಸಾಕಷ್ಟು ಜನರಿಗೆ ಈ ಕಂಪನಿಯ ಹೆಸರಿನಲ್ಲಿ ಮೋಸ ಮಾಡಿದ್ದಾರೆ. ಮೊದಲು ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರು ದಾಖಲಿಸಿಕೊಂಡಿಲ್ಲ. ಹೀಗಾಗಿ ಕೊಲ್ಲಾಪುರಕ್ಕೆ ಹೋಗಿ ದೂರು ನೀಡಲಾಗಿತ್ತು ಎಂದರು.
ಇದು ಬೋಗಸ್ ಕಂಪನಿಯಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಿದರೆ ಪೊಲೀಸರು ಆತನನ್ನು ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಆತನನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಬಳಿಕ ಎಸ್‌ಪಿಯೊಂದಿಗೆ ಮಾತನಾಡಿದಾಗ ದಾಂಡೇಲಿ ಡಿವೈಎಸ್‌ಪಿಗೆ ಹೇಳಿ ಪ್ರಕರಣ ದಾಖಳೀಸಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಪ್ರಸಾದ ಹಾಗೂ ಆತನ ಕುಟುಂಬಸ್ಥರನನು ಬಂಧಿಸಬೇಕು ಇದರ ಹೆಸರಿನಲ್ಲಿ ಇನ್ನಷ್ಟು ಜನರಿಗೆ ವಂಚನೆ ಮಾಡುವ ಮೊದಲು ಪೊಲೀಸರು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಚಂದ್ರಕಾಂತ ಅಗಸಿಮನಿ ತೆರಗಾಂವ, ಸಂಜಯ ಕ್ರಾಸ್ಟಾ ಪತ್ರಿಕಾಗೋಷ್ಟಿಯಲ್ಲಿದ್ದರು.