ದಾಂಡೇಲಿ: ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಇವರ ಸಂಯಕ್ತ ಆಶ್ರಯದಡಿ ಕಾಲೇಜಿನ ಸಭಾಭವದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಶನಿವಾರ ಆಚರಿಸಲಾಯಿತು.
ನಗರದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣ .ಡಿ. ಬಸಾಪುರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಮಿ ಮೇಲಿರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಕೇವಲ ಮನುಷ್ಯರ ಹಕ್ಕಿನ ಬಗ್ಗೆ ಚಿಂತಿಸದೇ ಸಕಲ ಜೀವಿಗಳ ಹಕ್ಕಿನ ಕುರಿತು ಅರಿವು ಮೂಡಿಸಿಕೊಳ್ಳಬೇಕು. ಮಾನವನ ಹಕ್ಕುಗಳು ಕುರಿತು ವಿದ್ಯಾರ್ಥಿಗಳು ತಿಳುವಳಿಕೆ ಪಡೆಯಬೇಕಾದ ಅವಶ್ಯಕತೆಯಿದೆ ಎಂದರು.
ಹಿರಿಯ ವಕೀಲ ಸೋಮಕುಮಾರ.ಎಸ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಹನುಮಂತ ಕುಲಕಣ ð, ಕಾರ್ಯದರ್ಶಿ ಐ.ಸಿ. ನಾಯ್ಕ, ಹಿರಿಯ ವಕೀಲರುಗಳಾದ ವಿ.ಆರ್.ಹೆಗಡೆ ಹಾಗೂ ಎಂ.ಸಿ. ಹೆಗಡೆ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ. ಒಕ್ಕುಂದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾವ್ಯ ಭಟ್ ಪ್ರಾರ್ಥಿಸಿದರು. ಡಾ. ನಾಸೀರಹ್ಮದ ಜಂಗೂಬಾಯಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ಎನ್. ಅಕ್ಕಿ ವಂದಿಸಿದರು, ವಕೀಲ ರಾಘವೇಂದ್ರ ಗಡೆಪ್ಪನವರ ನಿರೂಪಿಸಿದರು.