ಶಿರಸಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ತಾಲೂಕು ಘಟಕ ಶಿರಸಿ (ಉ.ಕ) ವತಿಯಿಂದ ಪ್ರತಿ ವರ್ಷ ತಾಲೂಕಿನ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸುತ್ತಿದ್ದು ಈ ಕಾರ್ಯಕ್ರಮವು ಡಿ. 29 ಶುಕ್ರವಾರದಂದು ನಡೆಯಲಿದೆ.
2022-23 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 95% ಪ್ರತಿಶತಕ್ಕಿಂತ ಅಧಿಕ ಹಾಗೂ ಪಿ.ಯು.ಸಿ.ಯಲ್ಲಿ 90% ಪ್ರತಿಶತಕ್ಕಿಂತ ಅಧಿಕ ಸಾಧನೆ ತೋರಿದ ತಾಲೂಕಿನ ಸರ್ಕಾರಿ ನೌಕರರ ಮಕ್ಕಳನ್ನು ಪುರಸ್ಕರಿಸಲಾಗುವುದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ತೋರಿದ ತಾಲೂಕಿನ ನೌಕರರು ಹಾಗೂ ಅವರ ಮಕ್ಕಳನ್ನು ಪುರಸ್ಕರಿಸಲಾಗುವುದು.ಅರ್ಹರು ಅರ್ಜಿಯೊಂದಿಗೆ ದೃಢಿಕೃತ ಅಂಕಪಟ್ಟಿ ಮತ್ತು ಇತ್ತೀಚಿನ ಪಾಸಪೋರ್ಟ ಸೈಜ್ ಪೋಟೋವನ್ನು ಸಂಘಕ್ಕೆ ಇಲ್ಲವೇ ತಮ್ಮ ಇಲಾಖೆಯಿಂದ ಆಯ್ಕೆಗೊಂಡ ಸಂಘದ ಪ್ರತಿನಿಧಿಗಳಿಗೆ ದಿನಾಂಕ 20-12-2023 ರ ಒಳಗೆ ಸಲ್ಲಿಸಲು ಕೋರಿದೆ. ವಿಶೇಷ ಸಾಧನೆ ತೋರಿ ಪುರಸ್ಕಾರಕ್ಕೆ ಆಯ್ಕೆಯಾದ ನೌಕರರಿಗೆ ಹಾಗೂ ಮಕ್ಕಳಿಗೆ ಫೋನ್ ಮೂಲಕ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಿರಣಕುಮಾರ್ ಹೆಚ್.ನಾಯ್ಕ (ಮೊ: +919449801404) ಮತ್ತು ವಸಂತ ನಾಯ್ಕ (ಮೊ: +919448206361) ರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿಲಾಗಿದೆ.