Slide
Slide
Slide
previous arrow
next arrow

‘ಟ್ವಿಂಕ್ಲಿಂಗ್ ಸ್ಟಾರ್ಸ್-2023’: ಅಜಿತ ಮನೋಚೇತನ ಮಕ್ಕಳ ಸಾಧನೆ

300x250 AD

ಶಿರಸಿ: ಸಾನಿಧ್ಯ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯು 20 ವರ್ಷ ಪೂರೈಸಿದ ನೆನಪಿಗಾಗಿ ಭಿನ್ನ ಸಾಮರ್ಥ್ಯದ ಮಕ್ಕಳ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆ “ಟ್ವಿಂಕ್ಲಿಂಗ್ ಸ್ಟಾರ್ಸ್”ನ್ನು ಡಿಸೆಂಬರ 13 ಮತ್ತು 14 ರಂದು ಆಯೋಜಿಸಲಾಗಿತ್ತು.

ಮಂಗಳೂರಿನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಜಿಲ್ಲೆ 3181 ರ ವಲಯ 3ರ ಸಹಾಯಕ ಗವರ್ನರ್ ಶಿವಾನಿ ಬಾಳಿಗಾ ಅಧ್ಯಕ್ಷತೆ ವಹಿಸಿದರು. ಪಾಲಿಕೆ ಸದಸ್ಯರಾದ ಕಿಶೋರ ಕೊಟ್ಟಾರಿ, ಜಗದೀಶ ಶೆಟ್ಟಿ, ಶಕೀಲಾ ಕಾವ, ಸಂತೋಷ ಸಿಕ್ವೇರಾ ಹಾಗೂ ಇತರರು ಉಪಸ್ಥಿತರಿದ್ದರು. ನೆಹರು ಮೈದಾನದಿಂದ ವಿಶೇಷ ಮಕ್ಕಳ ಮೆರವಣಿಗೆ ನಡೆಯಿತು.ಎರಡು ದಿನಗಳ ಜಾನಪದ ನೃತ್ಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 37 ತಂಡಗಳು ಭಾಗವಹಿಸಿದ್ದು, ಅದರಲ್ಲಿ ಶಿರಸಿ ಅಜಿತ ಮನೋಚೇತನಾ ಸಂಸ್ಥೆಯ ವಿಕಾಸ ಶಾಲೆಯ ವಿಶೇಷ ಮಕ್ಕಳು ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡು ರೂ.15,000/- ಮೊತ್ತದ ನಗದು ಬಹುಮಾನ ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಾದ ಮಯೂರ ಬೊಂಗಾಳೆ, ಸಮರ್ಥ ಹಳಕಾರ, ಶ್ರೀನಿವಾಸ ಭೋವಿವಡ್ಡರ, ಪ್ರಜ್ವಲ್ ಶೇಟ್, ಕಾವ್ಯ ಭೋವಿವಡ್ಡರ, ಸಮ್ಮೇದ ಜೈನ, ಸಾಲ್ವಿನ್ ಡಿಸೋಜ,ರತ್ನೇಶ್ ಭಟ್, ನಾಗರತ್ನ ಗೌಡ ಭಾಗವಹಿಸಿದ್ದರು. ಶಿಕ್ಷಕರಾದ ಕು. ಸುಮಿತ್ರಾ ಮರಾಠಿ, ಶ್ರೀಮತಿ ಪರಿಮಳಾ ಪಟಗಾರ, ಶ್ರೀಮತಿ ಗೀತಾ ಗೌಡ , ಮಕ್ಕಳನ್ನು ಕಾರ್ಯಕ್ರಮಕ್ಕೆ ಅಣಿಗೊಳಿಸಿದರು. ಮತ್ತು ಪ್ರಶಾಂತ ವೆರ್ಣೇಕರ್, ಸಂತೋಷ ನಾಯ್ಕ , ಪದ್ಮಾವತಿ ಆಚಾರಿ ಸಹಕರಿಸಿದರು. ವಿಶೇಷ ಮಕ್ಕಳ ಈ ಸಾಧನೆಗೆ ಅಜಿತ ಮನೋಚೇತನಾ ಆಡಳಿತ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿದೆ.

300x250 AD
Share This
300x250 AD
300x250 AD
300x250 AD
Back to top