Slide
Slide
Slide
previous arrow
next arrow

ಡಿ.16ಕ್ಕೆ ಸ್ವರ್ಣವಲ್ಲಿಯಲ್ಲಿ ‘ಆರಾಧನಾ ಮಹೋತ್ಸವ’: ಭಕ್ತಿ ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮತ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ಡಿ.16, ಶನಿವಾರದಂದು ಸೋಂದಾದ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನೆರವೇರಲಿದೆ.

ಅಂದು ಬೆಳಿಗ್ಗೆ 5:30 ಘಂಟೆಯಿಂದ ಶ್ರೀ ಗುರುಮೂರ್ತಿಯಲ್ಲಿ ಶತರುದ್ರ, ಮಧ್ಯಾಹ್ನ 12:30ಕ್ಕೆ ಮಹಾಮಂಗಳಾರತಿ, ಆರಾಧನಾ ಕಾರ್ಯಕ್ರಮಗಳು ಜರುಗಲಿದ್ದು, ನಂತರ ತೀರ್ಥ-ಪ್ರಸಾದ ವಿತರಣೆ ನಡೆಯಲಿದೆ.

300x250 AD

ಅದೇ ದಿನ ಸಾಯಂಕಾಲ 5 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಲಿದ್ದು ಗಾಯನದಲ್ಲಿ ಸರಾಫ ಬಝಾರ್ ನ ಪ್ರದೀಪ ಎಲ್ಲನಕರ್ ಶಿರಸಿ, ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ, ಯಡಳ್ಳಿ, ತಬಲಾದಲ್ಲಿ ಸುಧಾಕರ ನಾಯ್ಕ, ಶಿರಸಿ, ಕೀ ಬೋರ್ಡ್‌ನಲ್ಲಿ ಕೆ. ಪಿ. ಹೆಗಡೆ ದಾಸನಕೊಪ್ಪ, ರಿದಂ ಪ್ಯಾಡ್‌ನಲ್ಲಿ ಕಿರಣ ಹೆಗಡೆ ಕಾನಗೋಡು, ಕೊಳಲು ವಾದನದಲ್ಲಿ ವಿನಾಯಕ ಶಿರಾಲಿ ಸಹಕರಿಸಲಿದ್ದಾರೆ.
ಅಂದು ನಡೆಯುವ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸರ್ವರೂ ಆಗಮಿಸಿ, ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ಗುರು-ದೇವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.

Share This
300x250 AD
300x250 AD
300x250 AD
Back to top