ಶಿರಸಿ: ದಿ. ಶ್ರೀಪಾದ ಹೆಗಡೆ ಕಡವೆ ಇವರ 98 ನೇ ಜನ್ಮ ದಿನದ ಅಂಗವಾಗಿ, ದಿ. ಶ್ರೀಪಾದ ಹೆಗಡೆ ಕಡವೆ ಜನ್ಮ ಶತಾಬ್ಧಿ ಆಚರಣಾ ಸಮಿತಿ, ಟಿಎಸ್‌ಎಸ್ ಶ್ರೀಪಾದ ಹೆಗಡೆ ಕಡವೆ ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿರಸಿ, (ಟಿಎಸ್‌ಎಸ್ ಆಸ್ಪತ್ರೆ), ಹೆಚ್‌ಸಿಜಿ ಎನ್‌ಎಮ್‌ಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿ, ಶ್ರೀ ಜಗನ್ನಾಥೇಶ್ವರ ದೇವಸ್ಥಾನ ಆಡಳಿತ ಸಮಿತಿ, ನಿಶ್ಚಯ ಸೇವಾ ಸಂಸ್ಥೆ ಚಿಪಗಿ ಇವರ ಸಂಯುಕ್ತಾಶ್ರಯದಲ್ಲಿ ಡಿ.17, ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಚಿಪಗಿಯ ಶ್ರೀ ಜಗನ್ನಾಥೇಶ್ವರ ದೇವಸ್ಥಾನದ ಸಭಾಭವನದಲ್ಲಿ ‘ಉಚಿತ ಕ್ಯಾನ್ಸರ್ ಮತ್ತು ಆರೋಗ್ಯ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿದೆ.
ಭಾರತದಲ್ಲಿ ಮಹಿಳೆಯರನ್ನು ಹೆಚ್ಚಾಗಿ ಕಾಡುವಂತಹ ಕ್ಯಾನ್ಸರ್‌ನಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿದೆ. ಸ್ತನ ಕ್ಯಾನ್ಸರ್ ಭಾರತದಲ್ಲಿ ಶೇ. 27% ರಷ್ಟು ಹಾಗೂ ಗರ್ಭಕಂಠದ ಕ್ಯಾನ್ಸರ್ ಶೇ. 22% ರಷ್ಟು ಮಹಿಳೆಯರನ್ನು ಕಾಡುತ್ತಿದ್ದು, 25 ವರ್ಷ ಮೇಲ್ಪಟ್ಟ ಎಲ್ಲ ಮದುವೆಯಾದ ಮಹಿಳೆಯರು ಪ್ಯಾಪ್ ಸ್ಮಿಯರ್ ಪರೀಕ್ಷೆ ಹಾಗೂ ಎಲ್ಲ ಮಹಿಳೆಯರು ಸ್ತನ ಪರೀಕ್ಷೆಗೆ ಒಳಗಾಗಬೇಕು ಎಂಬ ನಿಟ್ಟಿನಲ್ಲಿ ವಿಶೇಷ ಕ್ಯಾನ್ಸರ್ ರೋಗ ತಪಾಸಣೆಯನ್ನು ಮಾಡಲಾಗುತ್ತಿದೆ.
ಗರ್ಭಕಂಠದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಪ್ಯಾಪ್ ಸ್ಮಿಯರ್ ಪರೀಕ್ಷೆಯಿಂದ ಮಾತ್ರ ಈ ಗಂಭೀರ ಸಮಸ್ಯೆಯನ್ನು ಗುರುತಿಸಬಹುದಾಗಿದ್ದು, ಸಮಸ್ತ ನಾಗರಿಕರು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.