ಹೊನ್ನಾವರ: ಶರಾವತಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ 17 ನೇ ವರ್ಷದ ಶರಾವತಿ ಉತ್ಸವ ಡಿ. 17 ರಂದು ಪಟ್ಟಣದ ಸೆಂಟ್ ಅಂತೋನಿ ಪ್ರೌಡಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಹೇಳಿದರು.
ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಕಳೆದ 16 ವರ್ಷದಿಂದ ದೇಶಿಯ ಕಲೆಯನ್ನು ಪೊತ್ಸಾಹಿಸುವ ಜೊತೆ ಕುಟುಂಬದವರೆಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಬಾರಿ ಡಿ. 17 ರಂದು 5.30ಕ್ಕೆ ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿ ವೀರಗಾಸೆ ನೃತ್ಯ, ಸರ್ಕಾರಿ ಪ್ರೌಡಶಾಲೆ ಪ್ರಭಾತನಗರ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ಕಾರ್ಯಕ್ರಮದ ಬಳಿಕ, ಸಭಾ ಕಾರ್ಯಕ್ರಮ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಬಿ. ಎನ್.ವಾಸರೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕ ಆಸ್ಪತ್ರೆಯ ಹೃದಯರೋಗ ತಜ್ಞರಾದ ಡಾ. ಪ್ರಕಾಶ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಅಂಕಣಕಾರರು ಹಾಗೂ ಚಿಂತಕರಾದ ನಾರಾಯಣ ಯಾಜಿ ಸಾಲೇಬೈಲ್ ಉಪಸ್ಥಿತಿ ವಹಿಸಲಿದ್ದಾರೆ. ಇದೇ ವೇಳೆ ಗೋ ಪ್ರೇಮಿ ಯೋಗೀಶ ಭಟ್ ಭಟ್ಕಳ, ನಿವೃತ್ತ ಸೈನಿಕರಾದ ಕ್ಯಾಪ್ಟನ ಗಜಾನನ ನಾಯ್ಕ, ಗೋಪ್ರೇಮಿ ಶಿವಾನಂದ ಮಡಿವಾಳ ಇವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಕಲಾ ಕೇಂದ್ರ ವಿನುತಾ ಹೆಗಡೆ ಇವರಿಂದ ಭರತನಾಟ್ಯ, ಪೂಜಾ ಹೆಗಡೆ ಬಳಗ ನಾಟ್ಯಂಜಲಿ ಕಲಾ ಕೇಂದ್ರ ಶಿರಸಿ ಇವರಿಂದ ಭರತನಾಟ್ಯ, ವಿದುಷಿ ಅನುರಾಧ ಹೆಗಡೆ ಇವರಿಂದ ಭರತನಾಟ್ಯ ರಾತ್ರಿ 8.30ಕ್ಕೆ ಯಕ್ಷಗೆಜ್ಜೆ ಶಿರಸಿ ಇವರಿಂದ “ಸುಧನ್ವಾರ್ಜುನ ಕಾಳಗ” ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಶರಾವತಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಉಪಸ್ಥಿತರಿದ್ದರು