Slide
Slide
Slide
previous arrow
next arrow

ಅಗಲಿದ ವಿದ್ಯಾರ್ಥಿನಿ ಐಶ್ವರ್ಯಾಳಿಗೆ ನುಡಿ ನಮನ

300x250 AD

ದಾಂಡೇಲಿ : ಅಪಘಾತಕ್ಕೀಡಾಗಿ ಮೃತಪಟ್ಟ ವಿದ್ಯಾರ್ಥಿನಿ ಐಶ್ವರ್ಯ ದೇವರಮನಿ ಈಕೆಗೆ ನಗರದ ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನುಡಿ ನಮನವನ್ನು ಸಲ್ಲಿಸಲಾಯಿತು.

ಮೃತ ಐಶ್ವರ್ಯಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ಲಾರೇಟ್ ಅವರು ಬೆಳೆದು ದೊಡ್ಡವಳಾಗಿ ಸಮಾಜಕ್ಕೆ ಆಸ್ತಿ ಆಗಬೇಕಾಗಿದ್ದ ಮಗು ಅಕಾಲಿಕವಾಗಿ ವಿಧಿವಶಳಾಗಿರುವುದು ನಮಗೆಲ್ಲರಿಗೂ ತೀವ್ರ ನೋವು ತಂದಿದೆ. ಚುರುಕಿನ ವಿದ್ಯಾರ್ಥಿನಿಯಾಗಿ, ಶಿಸ್ತಿನ ಸಿಪಾಯಿಯಾಗಿ ಗಮನ ಸೆಳೆದಿದ್ದ ಐಶ್ವರ್ಯಾಳ ಅಕಾಲಿಕ ನಿಧನ ನಮ್ಮೆಲ್ಲರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೃತಳ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸಿದರು.

ಸೆಂಟ್ ಮೈಕಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಐಶ್ವರ್ಯ ಅಪಘಾತಕ್ಕೀಡಾಗಿ ಜೀವನ್ಮರಣ ಹೋರಾಟದಲ್ಲಿದ್ದು, ಮಂಗಳವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಮೃತಳ ಗೌರವಾರ್ಥ ಬುಧವಾರ ಶಾಲೆಗೆ ರಜೆಯನ್ನು ನೀಡಲಾಯಿತು.

300x250 AD

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಮೃತಳನ್ನು ನೆನೆದು ಕಣ್ಣೀರಿಟ್ಟು, ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದರು.

Share This
300x250 AD
300x250 AD
300x250 AD
Back to top