Slide
Slide
Slide
previous arrow
next arrow

ವಲಯ ಅರಣ್ಯ ಇಲಾಖೆಯಿಂದ ಭವ್ಯ ದೀಪೋತ್ಸವ

300x250 AD

ಅಂಕೋಲಾ: ವಲಯ ಅರಣ್ಯ ಇಲಾಖೆ ರಾಮನಗುಳಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ್ತಿಕ ದೀಪೋತ್ಸವ ಹಾಗೂ ವಿಶೇಷ ಪೂಜೆ ತಾಲೂಕಿನ ರಾಮನಗುಳಿಯ ರಾಮಪಾದುಕಾ ದೇವಸ್ಥಾನದಲ್ಲಿ ಅತ್ಯಂತ ಸಂಭ್ರಮ, ಸಡಗರದಿಂದ ವಿಜೃಂಭಣೆಯಿಂದ ನಡೆಯಿತು.

ಸಂಜೆ ಮಹಿಳಾ ಮಂಡಳದ ಮಾತೆಯರಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ದೇವಸ್ಥಾನದ ಆವರಣದಲ್ಲಿ ಭವ್ಯ ‌ದೀಪೋತ್ಸವವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರಾಮನಗುಳಿ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಹೆಚ್, ಉಪವಲಯ ಅರಣ್ಯಾಧಿಕಾರಿಗಳಾದ ಹಜರತ್ ಅಲಿ ಕುಂದಗೋಳ, ಗುರುನಾಥ ಈಟಿ, ಮೆಹಬೂಬ್ ಸಾಬ್ ಅಂಕಲಿ, ಶಿವಾನಂದ ಮಾಳಿ, ಬಸವರಾಜ್ ಜಮಗಿ, ಅರಣ್ಯ ರಕ್ಷಕರಾದ ಗೋಪಾಲಕೃಷ್ಣ ನಾಯಕ, ಸೋಮನಾಥ ಕಂಬಾರ್, ಸತೀಶ ಹಾಗೂ ಸಿಬ್ಬಂದಿಗಳು ಊರ ನಾಗರಿಕರ ಜೊತೆಗೂಡಿ ಸಂಭ್ರಮದ ದೀಪೋತ್ಸವಕ್ಕೆ ಸಾಕ್ಷಿಯಾಗಿದ್ದು ವಿಶೇಷವಾಗಿ ಕಂಡು ಬಂತು.

300x250 AD
Share This
300x250 AD
300x250 AD
300x250 AD
Back to top