Slide
Slide
Slide
previous arrow
next arrow

ಪ್ರತಿಯೊಬ್ಬರೂ ಮಾನವ ಹಕ್ಕು ಬೆಂಬಲಿಸಿ ಬಾಳಬೇಕು: ಶಾಸಕ ದೇಶಪಾಂಡೆ

300x250 AD

ದಾಂಡೇಲಿ: ನಗರದ ಹಳೆ ನಗರಸಭೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಮಾನವ ಜನಪರ ಮಿಷನ್ ಆಶ್ರಯದಡಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಾನವನ ಬೆಳವಣಿಗೆ ಎಂಬ ಚಿಂತನ-ಮಂಥನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ, ಸ್ವತಂತ್ರವಾಗಿ ಬದುಕುವ ಮನುಷ್ಯನೋರ್ವನ ಹಕ್ಕನ್ನು ಗೌರವಿಸುವ ಹಾಗೂ ಈ ಭೂಮಿಯ ಮೇಲೆ ಬದುಕುತ್ತಿರುವ ಕೋಟಿ ಕೋಟಿ ಜನರಿಗೆ ಸಮಾನ ಹಕ್ಕುಗಳಿವೆ ಎಂದು ಸಾರುವ ದಿನವವಾದ ಇಂದು ಮಾನವ ಹಕ್ಕುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.
ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕ ಹಾಜಿ ಫಿರೋಜ್ ಪಿರ್ಜಾದೆ, ಮಾನವ ಹಕ್ಕುಗಳ ರಕ್ಷಣೆಯ ನೆಟ್ಟಿನಲ್ಲಿ ಹಾಗೂ ಈ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘಟನೆ ತನ್ನದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಂಘದ ನಿರ್ವಹಣೆಗೆ ಹಳೆ ನಗರಸಭೆಯ ಕಟ್ಟಡದಲ್ಲಿ ಕೊಠಡಿಯನ್ನು ಒದಗಿಸಿಕೊಟ್ಟ ಆರ್.ವಿ.ದೇಶಪಾಂಡೆಯವರು ಹಾಗೂ ನಗರಸಭೆಯ ಸರ್ವ ಸದಸ್ಯರಿಗೆ ಮತ್ತು ನಗರ ಸಭೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

300x250 AD

ಈ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕುರಿತಂತೆ ಹಾಗೂ ತಾಲೂಕಿಗೆ ಸಂಬಂಧಪಟ್ಟಂತೆ ವಿವಿಧ ಕಚೇರಿಗಳನ್ನು ಮಂಜೂರು ಮಾಡುವಂತೆ ವಿನಂತಿಸಿ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ತಹಸೀಲ್ದಾರ ಶೈಲೇಶ ಪರಮಾನಂದ, ನಗರ ಸಭೆಯ ಪೌರಾಯುಕ್ತ ಆರ್.ಎಸ್.ಪವಾರ, ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್.ಪಾಟೀಲ, ಬೆಳಗಾವಿಯ ನ್ಯಾಯವಾದಿ ಡಾ.ರವೀಂದ್ರ ತೋಟಿಗೇರ, ಸಂಘಟನೆಯ ರಾಜ್ಯ ಮುಖಂಡರುಗಳಾದ ಡಾ.ಪ್ರಕಾಶ ಐಹೋಳ್ಳಿ, ಅಲ್ಬರ ಖೋಜಾ, ಮಂಜುಳಾ ದೇವಿ ಮೊದಲಾದವರು ಉಪಸ್ಥಿತರಿದ್ದರು.

ಹಾಜಿ ಫಿರೋಜ್ ಪಿರ್ಜಾದೆ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ರವಿ ಸುತಾರ ವಂದಿಸಿದರು. ಸಂಘಟನೆಯ ಉಪಾಧ್ಯಕ್ಷರ ಆರ್.ವಿ.ಗಡಪ್ಪನವರ ನಿರೂಪಿಸಿದರು. ಸಂಘಟನೆಯ ಜಿಲ್ಲಾ ನಿರ್ದೇಶಕ ಅವಿನಾಶ ಘೋಡ್ಕೆ, ಸರ್ವ ಧರ್ಮಗಳ ಮಹಿಳಾ ಸಂಘಟನೆಯ ಅಧ್ಯಕ್ಷೆ ಕರ್ಣಮ್ಮ ತೊಡಟ್ಟಿ ಹಾಗೂ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Share This
300x250 AD
300x250 AD
300x250 AD
Back to top