Slide
Slide
Slide
previous arrow
next arrow

ಯುವಕರು ಈ ಅಮೃತ ಕಾಲವನ್ನು ವಿಕಸಿತ ಭಾರತಕ್ಕಾಗಿ ಬಳಸಿಕೊಳ್ಳಬೇಕು: ಮೋದಿ

300x250 AD

ನವದೆಹಲಿ: ಭಾರತಕ್ಕೆ ಇದು ಸೂಕ್ತ ಸಮಯವಾಗಿದ್ದು, ಯುವಕರು ಈ ಅಮೃತ ಕಾಲವನ್ನು ವಿಕಸಿತ ಭಾರತಕ್ಕಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ‘ವಿಕ್ಷಿತ್ ಭಾರತ್ @2047: ಯುವಜನತೆಯ ಧ್ವನಿ’ಗೆ ಚಾಲನೆ ನೀಡಿದ ಮೋದಿ, ಇದು ಭಾರತದ ಇತಿಹಾಸದಲ್ಲಿ ದೇಶವು ಮಹತ್ವದ ಜಿಗಿತ ಸಾಧಿಸಲು ಹೊರಟ ಅವಧಿಯಾಗಿದೆ ಎಂದು ಹೈಲೈಟ್ ಮಾಡಿದರು. ಅಭಿವೃದ್ಧಿ ಹೊಂದಿದ ಭಾರತದ ಕಡೆಗೆ ಕೆಲಸ ಮಾಡಲು ಮತ್ತು ಈ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಗುರಿ ಮತ್ತು ನಿರ್ಣಯಗಳನ್ನು ಹೊಂದಿಸಲು ಅವರು ಯುವಕರನ್ನು ಒತ್ತಾಯಿಸಿದರು.

ದೇಶಾದ್ಯಂತ ರಾಜಭವನದಲ್ಲಿ ಆಯೋಜಿಸಲಾದ ಕಾರ್ಯಾಗಾರಗಳಲ್ಲಿ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ದೇಶವನ್ನು ವಿಕಸಿತ ಭಾರತವನ್ನಾಗಿ ಮಾಡಲು ಜನರು ವಿಶೇಷವಾಗಿ ಯುವಕರು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕೆಂದು ಮೋದಿ ಕರೆ ನೀಡಿದರು. ಭವಿಷ್ಯದಲ್ಲಿ ದೇಶಕ್ಕೆ ನಾಯಕತ್ವವನ್ನು ನೀಡಬಲ್ಲ ಅಮೃತಕಾಲ ಪೀಳಿಗೆಯನ್ನು ತಯಾರು ಮಾಡುವಂತೆ ಪ್ರಧಾನಿ ಶಿಕ್ಷಣತಜ್ಞರನ್ನು ಒತ್ತಾಯಿಸಿದರು.

300x250 AD

ಪ್ರತಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಯುವಕರ ಶಕ್ತಿಯನ್ನು ವಿಕಸಿತ ಭಾರತದ ಸಾಮಾನ್ಯ ಗುರಿಯನ್ನು ಸಾಧಿಸುವತ್ತ ಹರಿಸುವ ಅಗತ್ಯವನ್ನು ಮೋದಿ ಒತ್ತಿ ಹೇಳಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ವೈವಿಧ್ಯಮಯ ಆಲೋಚನೆಗಳು ಕೊಡುಗೆ ನೀಡುತ್ತವೆ ಎಂದರು. ಅದಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮಿತಿಗಳನ್ನು ಮೀರಿ ವಿಕ್ಷಿತ್ ಭಾರತ್ @ 2047 ರ ದೃಷ್ಟಿಗೆ ಕೊಡುಗೆ ನೀಡಬೇಕೆಂದು ಪ್ರಧಾನಮಂತ್ರಿ ಒತ್ತಾಯಿಸಿದರು.

Share This
300x250 AD
300x250 AD
300x250 AD
Back to top