ನವದೆಹಲಿ: ಕಳೆದ ಎಂಟು ವರ್ಷಗಳಲ್ಲಿ ಭಾರತದ ‘ಜೈವಿಕ ಆರ್ಥಿಕತೆ’ 10 ಶತಕೋಟಿ ಡಾಲರ್‌ನಿಂದ 80 ಶತಕೋಟಿ ಡಾಲರ್‌ಗೆ ಎಂಟು ಪಟ್ಟು ಬೆಳೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ವರ್ಚುವಲ್ ಆಗಿ ‘ಬಯೋಟೆಕ್ನಾಲಜಿ: ದಿ ಪಾತ್ ಆಫ್ ಇನ್ನೋವೇಶನ್ ಆಂಡ್ ವೆಲ್‌ನೆಸ್ ಫಾರ್ ವಿಕ್ಷಿತ್ ಭಾರತ್’ ಕುರಿತು ಪ್ರೀ ವೈಬ್ರೆಂಟ್ ಗುಜರಾತ್ ಸೆಮಿನಾರ್ ಉದ್ದೇಶಿಸಿ ಮಾತನಾಡಿದ ಸಚಿವರು, ಮುಂಬರುವ ದಿನಗಳಲ್ಲಿ ಜೈವಿಕ ತಂತ್ರಜ್ಞಾನವು ಆರೋಗ್ಯ ರಕ್ಷಣೆಗೆ ದೊಡ್ಡ ಅಡಿಪಾಯವಾಗಲಿದೆ ಎಂದು ಹೇಳಿದರು.
ಬಯೋ ಅಗ್ರಿಕಲ್ಚರ್ ಮತ್ತು ಬಯೋ ಫಾರ್ಮಾಸ್ಯುಟಿಕಲ್ಸ್, ಬಯೋ ಸೇವೆಗಳು ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದಯೋನ್ಮುಖ ಕ್ಷೇತ್ರಗಳಾಗಿವೆ ಎಂದು ಸಚಿವರು ಹೇಳಿದರು. ಭಾರತವು ಶೀಘ್ರದಲ್ಲೇ ವಿಶ್ವದ ಟಾಪ್ 10 ಜೈವಿಕ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಅವರು ಹೇಳಿದರು.