ಕಾರವಾರ: ಒಡಿಸ್ಸಾ ಕಾಂಗ್ರೆಸ್ ಸಂಸದ ಧೀರಜ ಸಾಹು ಹಣ ಎಷ್ಟು ಸಂಗ್ರಹ ಮಾಡಿದ್ದಾರೆ ಗೊತ್ತಿಲ್ಲ. ಈಗಾಗಲೇ 350 ಕೋಟಿ ಸಿಕ್ಕಿದೆ. 40 ಮಷಿನ್‌ನಲ್ಲಿ ಹಣ ಎಣಿಕೆ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಜನಕ, ಚಾಂಪಿಯನ್ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದರು.
ಇಲ್ಲಿನ ಸುಭಾಸ್ ಸರ್ಕಲನಲ್ಲಿ ನಡೆದ ಕಾಂಗ್ರೆಸ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧೀರಜ ಸಾಹು ಕಾಂಗ್ರೆಸ್ ಸಂಸದರಾಗಿದ್ದಾರೆ. ದೇಶದ ಇತಿಹಾಸಲ್ಲಿ ಮೊದಲ ಬಾರಿಗೆ ಇಷ್ಟೊಂದು ಹಣ ಸಿಕ್ಕಿದೆ. ಹಣ ಕೊಟ್ಟು ಜನ ಖರೀದಿ ಮಾಡಲು ಕಾಂಗ್ರೆಸ್ ನವರು ಹೊರಟಿದ್ದಾರೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಗೆ ಹಣ ಲೂಟಿ ಮಾಡಿತ್ತಿದ್ದಾರೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಭ್ರಷ್ಟಾಚಾರ ಮಾಡಿಯೇ ಕಳೆದ ಕರ್ನಾಟಕ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಚುನಾವಣೆಗೂ ಪೂರ್ವ ನೀಡಿದ ಗ್ಯಾರೆಂಟಿ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಧೀರಜ ಸಾಹು ಮೇಲೆ ದಾಳಿ ಮಾಡಿದಾಗ 300 ಕೋಟಿ ಅಧಿಕ ಹಣ ಇದುವರೆಗೂ ಪತ್ತೆಯಾಗದೆ. ಇನ್ನೂ ಪತ್ತೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹಣ ಸಂಗ್ರಹ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡಿದ್ದರು. ಅವರಿಗೆ ಅವರೇ ಈಗ ನೈತಿಕತೆ ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಗುಡುಗಿದರು.
ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಚಂದ್ರು ಎಸಳೆ ಮೊದಲಾದವರು ಮಾತನಾಡಿದರು. ಇಲ್ಲಿನ ಸುಭಾಷ್ ಸರ್ಕಲ್ ಬಳಿ ಅರ್ಧಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಲಾಯಿತು.