Slide
Slide
Slide
previous arrow
next arrow

ಪ್ರಬಂಧ ಸ್ಪರ್ಧೆ: ವಿಜೇತರಿಗೆ ಪ್ರಶಸ್ತಿ ವಿತರಿಸಿದ ಈಶ್ವರ್ ಕಾಂದೂ

300x250 AD

ಕಾರವಾರ: ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಗುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಪ್ರೇರೇಪಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಮಹತ್ತರವಾದ ಹೆಜ್ಜೆಯನ್ನಿಟ್ಟಿದ್ದಾರೆ.

ಸ್ವತಃ ತಾವು ಭೇಟಿಕೊಟ್ಟ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕವಾಗುವಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಪ್ರಾಚಾರ್ಯರಿಗೆ, ಶಿಕ್ಷಕರಿಗೆ ಮನವರಿಕೆ ಮಾಡಿಕೊಡುತ್ತ ಬರುತ್ತಿದ್ದು, ಇದರಿಂದ ಪ್ರೇರಣೆಗೊಂಡು ಕಾರವಾರದ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಅನೀಮಿಯಾ ಮುಕ್ತ ಕರ್ನಾಟಕ ಶೀರ್ಷಿಕೆಯಡಿ ಜರುಗಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಶ್ರೇಣಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸೋಮವಾರ ಜಿಲ್ಲಾ ಪಂಚಾಯತ್‌ನ ಕಚೇರಿಗೆ ಆಹ್ವಾನಿಸಿ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

ತದನಂತರದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಸಂವಾದ ನಡೆಸಿದ ಸಿಇಒ, ವಿದ್ಯಾರ್ಥಿಗಳ ಮುಂದಿನ ಗುರಿ, ಪ್ರಸ್ತುತ ವಿದ್ಯಾಭ್ಯಾಸದ ಪ್ರಗತಿ, ಶೈಕ್ಷಣಿಕ ಚಟುವಟಿಕೆಗಳ ವೃದ್ಧಿಗೆ ಪೂರಕವಾಗಿ ಕೈಗೊಳ್ಳಬಹುದಾದ ಅಂಶಗಳ ಕುರಿತು ಚರ್ಚಿಸಿದರು. ಜೊತೆಗೆ ತಮ್ಮ ವಿದ್ಯಾರ್ಥಿ ಜೀವನ, ಇಂಜಿನಿಯರಿಂಗ್ ವ್ಯಾಸಂಗ, ಎಸ್‌ಎಸ್‌ಬಿ, ಏರ್‌ಪೋರ್ಸ್, ಐಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ರೂಪಿಸಿಕೊಂಡಿದ್ದ ಯೋಜನೆ, ನಿರಂತರ ಪ್ರಯತ್ನದ ಕುರಿತು ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡರು. ಹಾಗೇ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಐಎಎಸ್, ಇಂಜಿನೀಯರ್, ಡಾಕ್ಟರ್ ಆಗಬೇಕೆಂಬ ಗುರಿಯ ಸಾಧನೆಗೆ ಪೂರಕವಾಗುವಂತೆ ಹಲವು ಸಲಹೆ, ಸೂಚನೆಗಳನ್ನು ನೀಡಿದರು.

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕಾಲ ಕಾಲಕ್ಕೆ ಬರುವ ವಿಶೇಷ ದಿನಾಚರಣೆಗಳು, ಸ್ಥಳೀಯ ವಿಶೇಷತೆಗಳು, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಸಂವಾದ, ಸ್ಪರ್ಧೆ, ಚರ್ಚಾ ಕೂಡ, ಪ್ರಬಂಧ, ಚಿತ್ರಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ತುಂಬಾ ಅವಶ್ಯಕವಾಗಿದೆ. ಇದರಿಂದ ಮಕ್ಕಳಲ್ಲಿರುವ ಭೌದ್ಧಿಕ ಬೆಳವಣಿಗೆಗೆ ಪ್ರೇರೇಪಣೆ ಸಿಗುತ್ತದೆ. ಹೀಗಾಗಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಇಂಥಹ ಕಾರ್ಯಕ್ರಮಗಳ ಆಯೋಜನೆಗೆ ಹೆಚ್ಚಿನ ಆಧ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.

300x250 AD

ಕಾರವಾರದ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ಜರುಗಿದ್ದ ಅನೀಮಿಯಾ ಮುಕ್ತ ಕರ್ನಾಟಕ ಪ್ರಬಂಧ ಸ್ಪರ್ಧೆಯಲ್ಲಿ ಕಾಲೇಜ್‌ನ ವಿದ್ಯಾರ್ಥಿಗಳಾದ ಆರ್ಯನ್ ಜಿ. ನಾಯ್ಕ್ ಪ್ರಥಮ, ಮೇಧನ ಎಂ. ಅಂಬಿಗ ದ್ವಿತೀಯ, ಶ್ರೇಯಾ ಎಚ್. ಧುರಿ ಹಾಗೂ ಸಿದ್ದು ಬ. ಭಂಡಾರಿ ತೃತೀಯ ಸ್ಥಾನ ಪಡೆದು ವಿಜೇತರಾಗಿದ್ದಾರೆ.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಡಾ. ಹರ್ಷಾ, ಆರ್‌ಸಿಎಚ್‌ಒ ನಟರಾಜ, ಕಾರವಾರದ ಸರಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯರಾದ ರಮೇಶ ಎಸ್. ಪತ್ರೇಕರ, ಉಪನ್ಯಾಸಕರಾದ ಮಂಜುನಾಥ ಗುನಗಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top