Slide
Slide
Slide
previous arrow
next arrow

ಡಿ.19ರಿಂದ ಜೈಹಿಂದ್ ಗ್ರೌಂಡಿನಲ್ಲಿ ಅಂಕೋಲಾ ವೈಭವ

300x250 AD

ಅಂಕೋಲಾ: ತಾಂಡವ ಕಲಾನಿಕೇತನ ಬೆಂಗಳೂರು ಮತ್ತು ಅಂಕೋಲಾ ವೈಭವ ಸಮಿತಿ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಅಂಕೋಲಾದ ಜೈಹಿಂದ್ ಮೈದಾನದಲ್ಲಿ ಅಂಕೋಲಾ ವೈಭವ ನಡೆಯಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಮಿರ್ಜಾನ ಹೇಳಿದರು. ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. 7 ದಿನಗಳ ಭವ್ಯ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದ್ದು ಸ್ಥಳೀಯ ಕಾರ್ಯಕ್ರಮಗಳ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದ ಕಲಾವಿದರು, ಕಿರುತೆರೆ, ಚಲನಚಿತ್ರದ ಕಲಾವಿದರು ಅಭೂತಪೂರ್ವ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದರು. ತಾಂಡವ ಕಲಾನಿಕೇತನ ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಅದ್ದೂರಿ ಕಾರ್ಯಕ್ರಮಗಳನ್ನು ಸಂಘಟಿಸಿದ ತಂಡವಾಗಿದ್ದು ಕಳೆದ 7 ವರ್ಷಗಳಿಂದ ಕುಮಟಾ ವೈಭವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಅಂಕೋಲಾದಲ್ಲೂ ಕೂಡ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಎಂದರು. ಅಂಕೋಲಾ ವೈಭವ ಸಮಿತಿಯ ಅಧ್ಯಕ್ಷ ಪ್ರಕಾಶ ನಾಯಕ ಮಾತನಾಡಿ ಅಂಕೋಲಾ ವೈಭವ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಿದರು. ಸುದ್ದಿಗೋಷ್ಠಿಯಲ್ಲಿ ಸುರೇಶ ನಾಯ್ಕ ಬೇಳಾ, ರವಿ ನಾಯ್ಕ ಕುಮಟಾ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top