ಯಲ್ಲಾಪುರ: ಪಟ್ಟಣದ ಅಡಕೆ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕಾ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಗಮಕ ಕಲಾ ಪರಿಷತ್ತಿನ ಆಶ್ರಯದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನದಲ್ಲಿ ‘ಜೈಮಿನಿ ಭಾರತದಲ್ಲಿ ಯಮನ ವಿವಾಹ’ ಕುರಿತು ಗಮಕ ವಾಚನ-ವ್ಯಾಖ್ಯಾನ ನಡೆಯಿತು.
ಗಂಗಮ್ಮಾ ಕೇಶವಮೂರ್ತಿ ಅವರು ಯಮ ಹಾಗೂ ಮಾಲಿನಿಯ ವಿವಾಹದ ಕಥೆಯನ್ನು ಸುಶ್ರಾವ್ಯವಾಗಿ ವಾಚಿಸಿದರು. ಎಂ.ಎಸ್.ವಿನಾಯಕ ಶಿವಮೊಗ್ಗ ಅವರು ವ್ಯಾಖ್ಯಾನಿಸಿದರು.
ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ವಿನಾಯಕ ಪೈ, ಭಿಕ್ಕು ಗುಡಿಗಾರ ಕಲಾಕೇಂದ್ರದ ಮುಖ್ಯಸ್ಥ ಸಂತೋಷ ಗುಡಿಗಾರ ಉಪಸ್ಥಿತರಿದ್ದರು. ಅ.ಭಾ.ಸಾ.ಪ ಜಿಲ್ಲಾ ಸಂಯೋಜಕ ಗಣಪತಿ ಬೋಳಗುಡ್ಡೆ ಸ್ವಾಗತಿಸಿದರು. ಪತ್ರಕರ್ತ ಶ್ರೀಧರ ಅಣಲಗಾರ ನಿರ್ವಹಿಸಿದರು. ಕವಿ ಡಾ.ನವೀನಕುಮಾರ ವಂದಿಸಿದರು.