Slide
Slide
Slide
previous arrow
next arrow

ಡಿ.10ಕ್ಕೆ ದಾಂಡೇಲಿ ನಗರದ ಐಪಿಎಂ ಸೇತುವೆ ಲೋಕಾರ್ಪಣೆ

300x250 AD

ದಾಂಡೇಲಿ : ಕರ್ನಾಟಕ ಸರಕಾರ, ಲೋಕಪಯೋಗಿ ಇಲಾಖೆಯ ಆಶ್ರಯದಡಿ ದಾಂಡೇಲಿ ನಗರದ ಬೈಲುಪಾರಿನಿಂದ ಐಪಿಎಂ ಗೆ ಹೋಗುವ ರಸ್ತೆಯಲ್ಲಿ ರೂ: 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯ ಲೋಕಾರ್ಪಣೆ ಸಮಾರಂಭವು ಭಾನುವಾರ ಮಧ್ಯಾಹ್ನ 12 ಗಂಟೆಗೆ ಜರುಗಲಿದೆ.

ಶಾಸಕ ಆರ್.ವಿ.ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನೂತನ ಸೇತುವೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು. ಎಸ್. ವೈದ್ಯ ಲೋಕಾರ್ಪಣೆಗೊಳಿಸಲಿದ್ದಾರೆ.

ವಿಧಾನ ಪರಿಷತ್ ಸಭಾಪತಿಗಳಾಗಿರುವ ಬಸವರಾಜ ಹೊರಟ್ಟಿ ಘನ‌ ಉಪಸ್ಥಿತರಿರಲಿದ್ದು, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಗೌರವ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ಅನಂತ ಕುಮಾರ್ ಹೆಗಡೆ, ವಿಧಾನಪರಿಷತ್ ಸದಸ್ಯರುಗಳಾದ ಎಸ್.ವಿ. ಸಂಕನೂರ್, ಶಾಂತರಾಮ್ ಸಿದ್ದಿ, ಗಣಪತಿ ಉಳ್ವೇಕರ, ನಗರಸಭೆಯ ಸಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರಸಭಾ ಸದಸ್ಯ ವೆಂಕಟರಮಣಮ್ಮ ಮೈಥುಕುರಿ ಹಾಗೂ ನಗರಸಭೆಯ ಸದಸ್ಯರು ಭಾಗವಹಿಸಲಿದ್ದಾರೆ. ವಿಶೇಷ ಅವ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಿತೇಶ್ ಕುಮಾರ್ ಸಿಂಗ್ ಮತ್ತು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಭಾಗವಹಿಸಲಿದ್ದಾರೆ ಎಂದು ತಹಶೀಲ್ದಾರ್ ಶೈಲೇಶ್ ಪರಮಾನಂದವರು ಶನಿವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top