Slide
Slide
Slide
previous arrow
next arrow

ದೇಶ ಒಡೆಯವ ಏಜೆನ್ಸಿಗಳ ತಡೆಗೆ ಸಂಘಟಿತ ಹೋರಾಟ ಅಗತ್ಯ: ಅಜಿತ್ ಹನುಮಕ್ಕನವರ್

300x250 AD

ಯಲ್ಲಾಪುರ: ದೇಶವನ್ನು ಒಡೆಯುವ ಸಂಕಲ್ಪ ಹೊಂದಿರುವ ಏಜೆನ್ಸಿಗಳು ವ್ಯಾಪಕವಾಗಿ ತನ್ನ ಜಾಲವನ್ನು ಹಬ್ಬಿಸುತ್ತಿದ್ದು, ಇದನ್ನು ತಡೆಯುವ ಬಗ್ಗೆ ಜಾಗೃತಿ ಮತ್ತು ಸಂಘಟಿತ ಹೋರಾಟ ಅಗತ್ಯ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.

ಅವರು ಪಟ್ಟಣದ ಅಡಕೆ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಜಿಲ್ಲೆ ಹಾಗೂ ತಾಲೂಕು ಸಮಿತಿ, ಕರ್ನಾಟಕ ಗಮಕ ಕಲಾ ಪರಿಷತ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಜಿಲ್ಲಾಮಟ್ಟದ ಸಾಹಿತ್ಯ-ಗಮಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ದೇಶ ಒಡೆಯುವುದಕ್ಕಾಗಿ ಬೇರೆ ಬೇರೆ ಆಯಾಮಗಳಲ್ಲಿ ವ್ಯವಸ್ಥಿತ ಹೋರಾಟಗಳು ನಡೆಯುತ್ತಿವೆ. ಆದರೆ ಐತಿಹಾಸಿಕ ಹಿನ್ನೆಲೆ, ಶ್ರೇಷ್ಠತೆ ಹೊಂದಿದ ಭಾರತವನ್ನು ಒಡೆಯುವುದು ಅಷ್ಟು ಸುಲಭವಲ್ಲ. ಈ ಜನಾಂಗ ಜವಾಬ್ದಾರಿ ಅರಿತು ನಡೆದರೆ ದೇಶದ ಭವ್ಯತೆ ಸುಭದ್ರವಾಗಿರಲು ಸಾಧ್ಯ ಎಂದರು.

ಇರುವುದನ್ನು ತ್ಯಾಗ ಮಾಡಿ ರಾಮ, ಅಶೋಕ, ಬುದ್ಧರಂತಹ ಮಹಾಪುರುಷರನ್ನು ಗೌರವಿಸುವ, ಪೂಜಿಸುವ ಸಂಸ್ಕೃತಿ ನಮ್ಮದು. ಈ ವಿಶಿಷ್ಟ ಸಂಸ್ಕೃತಿಯನ್ನು ಪಾಶ್ಚಾತ್ಯರು ಮೆಚ್ಚಿ ಅನುಸರಿಸುತ್ತಿದ್ದಾರೆ. ಆದರೆ ಭಾರತೀಯರು ನಮ್ಮ ಪರಂಪರೆಯ ಮಹತ್ವವನ್ನು ಅರಿಯದೇ, ಜಾಗೃತಗೊಳ್ಳದೇ ಇರುವುದು ವಿಪರ್ಯಾಸ ಎಂದ ಅವರು ದೇಶಪ್ರೇಮ ಎನ್ನುವುದು ಶ್ರೇಷ್ಠತೆ ಅಲ್ಲ. ಪ್ರತಿಯೊಬ್ಬರಲ್ಲೂ ಇರಬೇಕಾದ ಭಾವನೆ ಅದು. ಪರಮ ವೈಭವದ ಭಾರತಕ್ಕಾಗಿ ನಮ್ಮ ನಮ್ಮ ಕ್ಷೇತ್ರದಲ್ಲಿ ನಮ್ಮಿಂದ ಆದ ಸೇವೆಯನ್ನು ಮಾಡುತ್ತ ಸಾಗಬೇಕು. ಇಂದಿನ ಪೀಳಿಗೆ ಕೈಗೊಳ್ಳುವ ನಿರ್ಧಾರ, ಸಾಗುವ ದಾರಿಯ ಆಧಾರದ ಮೇಲೆ ಎಷ್ಟು ಬೇಗ ಭಾರತ ವಿಶ್ವಗುರುವಾಗಬಲ್ಲದು ಎಂಬುದು ನಿರ್ಧಾರವಾಗುತ್ತದೆ ಎಂದರು.

300x250 AD

ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಪ್ರಾಚೀನ ಗ್ರಂಥ ಭಂಡಾರವನ್ನು ಸಂಪೂರ್ಣವಾಗಿ ಓದುವ, ಅರ್ಥೈಸುವ ಕಾರ್ಯ ಆಗಬೇಕಾಗಿದೆ. ನಮ್ಮತನದ ಮಹತ್ವವನ್ನು ನಾವು ಅರಿಯುವ ಈ ಕಾರ್ಯಕ್ಕೆ ಅ.ಭಾ.ಸಾ.ಪ ವೇದಿಕೆಯಾಗಲಿ ಎಂದರು.

ಗಮಕ ಕಲಾ ಪರಿಷತ್ ಗೌರವಾಧ್ಯಕ್ಷೆ ಗಂಗಮ್ಮಾ ಕೇಶವಮೂರ್ತಿ, ಅ.ಭಾ.ಸಾ.ಪ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು, ಕಾರ್ಯಕಾರಿ ಸದಸ್ಯ ಜಗದೀಶ ಭಂಡಾರಿ, ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ, ಅಭಾಸಾಪ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ, ಜಿಲ್ಲಾ ಸಂಯೋಜಕ ಗಣಪತಿ ಬೋಳಗುಡ್ಡೆ, ತಾಲೂಕು ಸಮಿತಿ ಅಧ್ಯಕ್ಷ ಗಣಪತಿ ಕಂಚಿಪಾಲ, ಕಾರ್ಯದರ್ಶಿ ಶ್ರೀರಾಮ ಲಾಲಗುಳಿ, ಸಹಕಾರ್ಯದರ್ಶಿ ಚಂದ್ರಶೇಖರ.ಸಿ.ಎಸ್ ಇತರರಿದ್ದರು. ಶಿಕ್ಷಕ ಶ್ರೀಧರ ಹೆಗಡೆ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top