ಶಿರಸಿ: ಜಿಲ್ಲೆಯ ಅದರಲ್ಲೂ ಶಿರಸಿ ನಗರದ ಪ್ರಮುಖ ಸಮಸ್ಯೆಯಾಗಿರುವ ಫಾರ್ಮ್ ನಂ.3 ಸಮಸ್ಯೆಯನ್ನು ರಾಜ್ಯ ಸರಕಾರ ಕೂಡಲೇ ಬಗೆಹರಿಸಬೇಕೆಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಕ್ಷೇತ್ರದ ನಿವಾಸಿಗಳಿಗೆ ಫಾರ್ಮ್ ನಂ.3 ಲಬನ್ಯವಿರದ ಕಾರಣದಿಂದ ಜಾಗ ನೊಂದಣಿ, ವರ್ಗಾವಣೆ, ಸಾಲ ಸೌಲಭ್ಯಕ್ಕೆ ತೀವ್ರ ಅಡಚಣೆಯಾಗಿದೆ. ಸಂಬ0ಧಪಟ್ಟ ಇಲಾಖೆ ಹಾಗು ರಾಜ್ಯ ಸರಕಾರ ಈ ಕೂಡಲೇ ಜನತೆಯ ಸಮಸ್ಯೆಗೆ ಸ್ಪಂದಿಸಬೇಕೆ0ದರು.