Slide
Slide
Slide
previous arrow
next arrow

ದೈಹಿಕ ಕ್ಷಮತೆಯಲ್ಲಿ ಕ್ರೀಡೆ ನಿರ್ಣಾಯಕ ಪಾತ್ರ ವಹಿಸುತ್ತದೆ: ವಸಂತ ರೆಡ್ಡಿ

300x250 AD

ಹೊನ್ನಾವರ: ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ.ಕಾಲೇಜಿನ ಕ್ರೀಡಾಂಗಣದಲ್ಲಿ ಹೊನ್ನಾವರ ಅರಣ್ಯ ಇಲಾಖೆ , ಹೊನ್ನಾವರ ವಿಭಾಗದಿಂದ ಕೆನರಾ ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ -2023 ಅದ್ದೂರಿಯಾಗಿ ಚಾಲನೆಗೊಂಡಿತು.

ಹೊನ್ನಾವರದ ಇತಿಹಾಸದಲ್ಲೇ ಮೊಟ್ಟ ಮೊದಲು ಅರಣ್ಯ ಇಲಾಖೆ ಅದ್ದೂರಿ ಕ್ರೀಡೆಯನ್ನು ಆಯೋಜನೆ ಮಾಡಿದೆ. ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ ಅಧ್ಯಕ್ಷ, ಮಾನ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾಪಟುಗಳು ಅತ್ಯಂತ ಉತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ. ನಾವು ಒತ್ತಡದಿಂದ ಹಾಗೂ ದಕ್ಷತೆಯಿಂದ ಕಾರ್ಯವನ್ನು ಮಾಡುತ್ತಿರುತ್ತೇವೆ. ಆದರೆ ಈ ವಿಚಾರ ಬಹಳಷ್ಟು ಮಂದಿಗೆ ತಿಳಿದಿರುವುದಿಲ್ಲ. ಅಲ್ಲದೆ ನಮ್ಮ ಜಿಲ್ಲೆಯಲ್ಲಿ 830000 ಹೆಕ್ಟೆರ್ ಪ್ರದೇಶ ಅರಣ್ಯವಿದೆ. ನಮ್ಮ ಕೆಲಸ ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯಿಂದ ಅರಣ್ಯವನ್ನು ಬೆಳೆಸಲು ಹಾಗೂ ಗಳಿಸಲು ಕಾರಣವಾಗಿದೆ. ನಾವು ದೈಹಿಕವಾಗಿ ಕ್ಷಮತೆಯನ್ನು ಹೊಂದಿರಬೇಕು. ಇದಕ್ಕೆ ಕ್ರೀಡೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮುಂಬರುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಳುಗಳ ಆಯ್ಕೆಗೆ ಈ ಟೂರ್ನಿ ಮಹತ್ವದ್ದಾಗಿದೆ. ಕ್ರೀಡೆಯಲ್ಲಿ ಸ್ಫೂರ್ತಿ, ಶಿಸ್ತು ,ಭ್ರಾತೃತ್ವದಿಂದ ಭಾಗವಹಿಸಿ ಎಂದು ಕರೆ ನೀಡಿದರು.

ಇದೇ ವೇಳೆ ಎಂ.ಪಿ.ಇ.ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ , ಶಿವಾನಿ ,ಎಸ್.ಡಿ.ಎಂ.ಕಾಲೇಜು ಪ್ರಾಚಾರ್ಯ ಸಂಜೀವ್ ನಾಯ್ಕ, ಎಂ.ಪಿ.ಇ.ಸೊಸೈಟಿ ಕಾರ್ಯದರ್ಶಿ ಎಸ್.ಎಂ.ಭಟ್ , ಡಾ.ಪ್ರಶಾಂತ್ ಕುಮಾರ್,ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರವಾರ, ಡಾ. ಅಜ್ಜಯ್ಯ ಜಿ.ಆರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ, ಎಸ್.ಜಿ.ಹೆಗಡೆ, ಉಪಅರಣ್ಯ ಸಂರಕ್ಷಣಾಧಿಕಾರಿ ಯಲ್ಲಾಪುರ,ಹೆಚ್.ಸಿ.ಬಾಲಚಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಳಿಯಾಳ, ಅಬ್ದುಲ್ ಅಜೀಜ್ ಶೇಖ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಂಚಾರಿದಳ ಶಿರಸಿ, ಸುಧೀಶ್ ನಾಯ್ಕ, ಯುವಜನ ಕ್ರೀಡಾಇಲಾಖೆ , ಹೊನ್ನಾವರ ಇವರುಗಳು ವೇದಿಕೆ ಮೇಲೆ ಹಾಜರಿದ್ದರು.

300x250 AD

ಈ ಕ್ರೀಡಾಕೂಟ ಪ್ರತಿ ವರ್ಷ ನಡೆಯುವುದಾಗಿದೆ. ಈ ಬಾರಿ ಹೊನ್ನಾವರದಲ್ಲಿಆಯೋಜನೆಗೊಂಡಿದೆ. ಇನ್ನು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಪ್ರಮುಖವಾದುದ್ದಾಗಿದೆ. ಈ ವರ್ಷದ ರಾಜ್ಯ ಮಟ್ಟದ ಅರಣ್ಯ ಕ್ರೀಡಾಕೂಟಗುಲ್ಬರ್ಗಾದಲ್ಲಿ ನಡೆಯಲಿದೆ. ಕೆನರಾ ವೃತ್ತದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲುಈ ಕ್ರೀಡಾಕೂಟ ಸಹಕಾರಿಯಾಗಿದೆ. ೧೯೯೩ ರಿಂದ ಕ್ರೀಡಾಕೂಟ ನಡೆಯುತ್ತಾ ಬಂದಿದೆ.ದುವರೆಗೆ ಒಟ್ಟು ೨೬ ಕ್ರೀಡಾಕೂಟಗಳು ನಡೆದಿದ್ದು ೧೦ ಕ್ಕೂ ಹೆಚ್ಚು ಬಾರಿ ಕೆನರಾವಲಯ ಪ್ರಥಮ ಸ್ಥಾನವನ್ನು ಪಡೆದಿದೆ. ಈ ಬಾರಿಯೂ ಕೆನರಾ ವೃತ್ತ ಪ್ರಥಮಸ್ಥಾನ ಪಡೆದು ವಿಜಯ ಪತಾಕೆ ಹಾರಿಸುವ ಆಲೋಚನೆಯನ್ನು ಹೊಂದಿದೆ.ರವಿಶAಕರ್ ಸಿ ,ವೃತ್ತಮಟ್ಟದ ಅರಣ್ಯ ಕ್ರೀಡಾಕೂಟದ ಕಾರ್ಯದರ್ಶಿ , ಉಪ ಅರಣ್ಯಸಂರಕ್ಷಣಾಧಿಕಾರಿ ಹೊನ್ನಾವರ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಎ.ಸಿ.ಎಫ್ಎಸ್.ಎಸ್.ನಿಂಗಾಣಿ, ಹೊನ್ನಾವರ ಇವರು ಸ್ವಾಗತಿಸಿದರು. ಗಾನಾ ಸಂಗಡಿಗರುಪ್ರಾರ್ಥಿಸಿದರು. ಎಲ್.ಲೋಹಿತ್ , ಇವರು ವಂದಿಸಿದರು. ಯೋಗೀಶ್ ಮಿರ್ಜಾನ್ ನಿರೂಪಿಸಿದರು.

Share This
300x250 AD
300x250 AD
300x250 AD
Back to top