Slide
Slide
Slide
previous arrow
next arrow

ದಾಂಡೇಲಿಯ ಕಾರ್ಮಿಕ ವಿಮಾ ಆಸ್ಪತ್ರೆಗೆ ಡಾ.ವರದರಾಜ್ ಭೇಟಿ

300x250 AD

ದಾಂಡೇಲಿ: ನಗರದ ಕಾರ್ಮಿಕ ವಿಮಾ ಆಸ್ಪತ್ರೆಗೆ ಕಾರ್ಮಿಕರ ವಿಮಾ ಯೋಜನೆಯ ನಿರ್ದೇಶಕರಾದ ಡಾ.ವರದರಾಜ್ ಶುಕ್ರವಾರ ಭೇಟಿ ನೀಡಿದರು.

ಕಾರ್ಮಿಕ ವಿಮಾ ಆಸ್ಪತ್ರೆಗೆ ಭೇಟಿ ನೀಡಿದ ಡಾ.ವರದರಾಜ್ ಆಸ್ಪತ್ರೆಯ ವಿವಿಧ ವಿಭಾಗಗಳ ಕುರಿತಂತೆ ಪರಿಶೀಲನೆಯನ್ನು ನಡೆಸಿದರು. ಆನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸೈಯದ್ ಗೌಸ್ ಜೊತೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಸಾಬ್ ಕೇಸನೂರು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕರೀಂ ಅಜ್ರೇಕರ್, ಡಾ.ವರದರಾಜ್ ಅವರ ಜೊತೆ ಮಾತನಾಡಿ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯದ್ದು ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿದರು.

300x250 AD

ಈ ವೇಳೆ ಡಾ.ವರದರಾಜ್ ಇಲ್ಲಿಯ ಆಸ್ಪತ್ರೆಗೆ ಸಂಬಂಧಪಟ್ಟಂತೆ ವಿವಿಧ ಬೇಡಿಕೆಗಳ ಕುರಿತಾಗಿ ಗಮನಕ್ಕೆ ತರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕರ ವಿಮಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸೈಯದ್ ಗೌಸ್ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top