ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.9 ಶನಿವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.
ಪಟ್ಟಣ ಶಾಖಾ ವ್ಯಾಪ್ತಿಯ ಮಾರಿಕಾಂಬಾ ನಗರ, ರಾಮನಬೈಲ್, ಗೊಲಗೇರಿ ಓಣಿ, ಮುಳಗುಂದ ಕಾಲೋನಿ, ಶ್ರೀರಾಮ ಕಾಲೋನಿ, ಹುಬ್ಬಳ್ಳಿ ರೋಡ್, ಇಂದಿರಾನಗರ, ಕರಿಗುಂಡಿ ರೋಡ್ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು,ಕಾಮಗಾರಿ ಪೂರ್ಣಗೊಂಡಲ್ಲಿ ಈ ಮೇಲೆ ತಿಳಿಸಿರುವ ಅವಧಿಯ ಮೊದಲೇ ವಿದ್ಯುತ್ ಸರಬರಾಜು ಮಾಡಲಾಗುವುದು.
ಆದ ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿರವರು ತಿಳಿಸಿದ್ದಾರೆ.