ಶಿರಸಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ನಡೆಸಿದ್ದ ಪ್ರಬಂಧ ಬರಹ ಸ್ಪರ್ಧೆಯಲ್ಲಿ,ಇಂಗ್ಲಿಷ್ ಮಾಧ್ಯಮದಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಇಲ್ಲಿನ ಲಯನ್ಸ್ ಶಾಲೆಯ ಒಟ್ಟು 32 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲಾ ಮಟ್ಟದಲ್ಲಿ “ಸಮಯ ವ್ಯರ್ಥವಾದರೆ ಬದುಕೇ ವ್ಯರ್ಥ” ಎಂಬ ಸಮಯದ ಮಹತ್ವವನ್ನು ಸಾರುವಂತಹ ಕನ್ನಡ ಮಾಧ್ಯಮದಲ್ಲಿ ಬರೆದಿರುವ ಪ್ರಬಂಧ ಸ್ಪರ್ಧೆಯಲ್ಲಿ ಎನ್. ಶರತ್ ತೃತೀಯ ಸ್ಥಾನ, ವರ್ಷಾ ವಿ. ಹೆಗಡೆ ದ್ವಿತೀಯ ಸ್ಥಾನ, ನವ್ಯಾ ಹೆಗಡೆ ಪ್ರಥಮ ಸ್ಥಾನವನ್ನು ಪಡೆದಿದ್ದಾ. ಇದೇ ವಿಷಯದ ಕುರಿತು ಆಂಗ್ಲ ಮಾಧ್ಯಮದಲ್ಲಿ ಬರೆದಿರುವಂತಹ ಸ್ಕಂದ ಶೆಟ್ಟಿ ತೃತೀಯ ಸ್ಥಾನ, ಸೂಫಿಯಾ ಗುಲಗಂದಿ ದ್ವಿತೀಯ ಸ್ಥಾನ, ಸಮನ್ವಿತಾ ತೆಂಬದಮನೆ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳಿಗೆ, ಇವರ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರಿಗೆ , ತರಬೇತುದಾರರಿಗೆ,ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಯ ,ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಲಯನ್ ಸಮೂಹ ಶಾಲೆಗಳ ಪ್ರಾಚಾರ್ಯರು , ಶಿಕ್ಷಕ-ಶಿಕ್ಷಕೇತರ ವೃಂದ,ಶಿರಸಿ ಲಯನ್ಸ್ ಕ್ಲಬ್ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿ, ಶುಭ ಹಾರೈಸಿದ್ದಾರೆ.