Slide
Slide
Slide
previous arrow
next arrow

ಸಮಾಜದ ಬದಲಾವಣೆ ಶಿಕ್ಷಕರಿಂದ ಸಾಧ್ಯ: ಡಾ.ರವಿ ಹೆಗಡೆ

300x250 AD

ಸಿದ್ದಾಪುರ: ತರಗತಿಯ ಕೋಣೆಯಲ್ಲಿ ದೇಶದ ಅಸ್ತಿಭಾರ ಅಡಗಿದ್ದು ಶಿಕ್ಷಕರು ಮನಸ್ಸು ಮಾಡಿದರೆ ಸಮಾಜವನ್ನು ಬದಲಾವಣೆಯತ್ತ ಕೊಂಡೊಯ್ಯಲು ಸಾಧ್ಯ. ಉತ್ತಮ ಶಿಕ್ಷಣ ವ್ಯವಸ್ಥೆ ಕಾಲಕಾಲಕ್ಕೆ ತರಬೇತಿ ರೂಪದಲ್ಲಿ ಸಿಕ್ಕರೆ ಹೊಸ ವಿಷಯಗಳ ಆವಿಷ್ಕಾರದೊಂದಿಗೆ ತರಗತಿಯಲ್ಲಿ ಮಕ್ಕಳನ್ನು ವೈಚಾರಿಕ ಕ್ಷೇತ್ರಕ್ಕೆ ತಲುಪಿಸಬಹುದು. ಶೈಕ್ಷಣಿಕ ಕ್ರಾಂತಿ ಆಗದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.

ಅವರು ಆಶಾಕಿರಣ ಟ್ರಸ್ಟ್ ಅಡಿಯಲ್ಲಿ ನಡೆಯುವ ಜೆ.ಎಂ.ಆರ್. ಅಂಧಮಕ್ಕಳ ವಸತಿ ಶಾಲೆಯಲ್ಲಿ ತಾಲೂಕಿನ ಪ್ರೌಢಶಾಲಾ ಇಂಗ್ಲೀಷ್ ಹಾಗೂ ಗಣಿತ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ.ನಾಯ್ಕ ಗೋಳಗೋಡ ಮಾತನಾಡಿ, ಶಿಕ್ಷಣ ನಿಂತ ನೀರಲ್ಲ. ಅದು ಬದಲಾವಣೆ ಆಗುತ್ತಲೇ ಇರುತ್ತದೆ. ಹೊಸ ವಿಚಾರಗಳು ಸಂಶೋಧನೆಗೊ0ಡು ಕೂತೂಹಲವನ್ನು ಹೆಚ್ಚಿಸುತ್ತದೆ. ಶಿಕ್ಷಣದಲ್ಲಿ ಬೋಧನೆಯ ಜತೆ ಹೊಸ ವಿಷಯಗಳ ಸಂಗತಿ ಬರಬೇಕು. ಕಾಲಕಾಲಕ್ಕೆ ನೂತನ ಆವಿಷ್ಕಾರದ ಪ್ರಯೋಜನ ಸಿಗಲು ತರಬೇತಿಗಳು ಶಿಕ್ಷಕರಿಗೆ ಲಭ್ಯವಾಗಬೇಕು ಎಂದರು.

ಸ0ಪನ್ಮೂಲ ವ್ಯಕ್ತಿಗಳಾಗಿ ಜನತಾ ವಿದ್ಯಾಲಯ ಕುಳವೆ ಬರೂರು ಮುಖ್ಯ ಶಿಕ್ಷಕ ವಿನೋದ ಎಲ್.ಹೆಗಡೆ ಹಾಗೂ ಯಡಳ್ಳಿ ವಿದ್ಯೋದಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ.ಜಿ.ಭಟ್ಟ ಮತ್ತು ಶಿರಳಗಿ ಪ್ರೌಢಶಾಲಾ ಸಹಶಿಕ್ಷಕಿ ಮಹಾಲಕ್ಷ್ಮಿ ಹೆಗಡೆ ತರಬೇತಿ ನೀಡಿದರು. ವೇದಿಕೆಯಲ್ಲಿ ಲಯನ್ಸ್ ನಿಕಟಪೂರ್ವ ಅಧ್ಯಕ್ಷೆ ಶ್ಯಾಮಲಾ ಆರ್. ಹೆಗಡೆ ಹೂವಿನಮನೆ, ಲಯನ್ಸ್ ಕ್ಲಬ್ ಕೋಶಾಧ್ಯಕ್ಷ ಆನಂದ ವಿ. ಶೇಟ್‌ರವರು ಉಪಸ್ಥಿತರಿದ್ದರು.

300x250 AD

ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಎಂ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ಸ್ವಾಗತಿಸಿದರು. ಜಿ. ಜಿ. ಹೆಗಡೆ ಬಾಳಗೋಡ ನಿರೂಪಿಸಿ ವಂದಿಸಿದರು. ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ರವಿ ಹೆಗಡೆ ಹೂವಿನಮನೆ ಅವರು ವಹಿಸಿದ್ದರು. ಸಂಧ್ಯಾ ಶಾಸ್ತ್ರೀ, ಜನಾರ್ಧನ ಭಟ್, ಬಿ. ಜಿ. ಹೆಗಡೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಮುಖ್ಯ ಶಿಕ್ಷಕ ವಿನೋಧ ಎಲ್. ಭಟ್ ಹಾಗೂ ಯಡಳ್ಳಿ ವಿದ್ಯೋದಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ. ಜಿ ಭಟ್ ಅವರುಗಳು ಮಾತನಾಡಿದರು.

ಬಿಇಓ ಜಿ.ಐ.ನಾಯ್ಕ ಮಾತನಾಡಿ, ಶಿಕ್ಷಕರಿಗೆ ಕಾಲಕಾಲಕ್ಕೆ ಲಭ್ಯವಾದ ಮಾಹಿತಿಗಳು ಸಿಕ್ಕಾಗ ತರಗತಿಯ ಕೋಣೆ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು. ಜಿ.ಜಿ.ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಶ್ಯಾಮಲಾ ಹೆಗಡೆ ಹೂವಿನಮನೆ ವಂದಿಸಿದರು.

Share This
300x250 AD
300x250 AD
300x250 AD
Back to top