ಹಳಿಯಾಳ: ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಕೌಶಲ್ಯ ಸಂವರ್ಧನ ತರಬೇತಿಗಾಗಿ ವಾಹನ ಉತ್ಪಾದನ ಸಂಸ್ಥೆಯಾದ ಟೊಯೋಟಾ ಕಿಲ್ಕೋಸ್ಕರ ಮೋಟಾರದ ಜೊತೆ ಅಸೆಂಬ್ಲಿ ಫಿಟ್ಟರ ತರಬೇತಿ ಜಾರಿಗೊಳಿಸುವ ಸಲುವಾಗಿ ಒಡಂಬಡಿಕೆ ಮಾಡಿಕೊಂಡಿತ್ತು.
ಈಗಾಗಲೇ ಡಿಪಿಐಟಿಐ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡುವ ಸಲುವಾಗಿ ಟೊಯೋಟಾ ಕಿಲ್ಕೋಸ್ಕರ ಮೋಟರ್ಸ ಜೊತೆ ಎಮ್‌ಎಮ್‌ವಿ, ಅಟೋಮೋಟಿವ್ ಪೇಂಟ್ ರಿಪೇರ್, ಅಟೋಮೋಟಿವ್ ಬಾಡಿ ರಿಪೇರ ವೃತ್ತಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಈ ಒಪ್ಪಂದದ ಪ್ರಕಾರ ಫಿಟ್ಟರ ವೃತ್ತಿಯ ತರಬೇತಿಯ ಜೊತೆಗೆ ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯದ ಅಗತ್ಯವನ್ನು ಪೂರೈಸಲು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಅಸೆಂಬ್ಲಿ ಫಿಟ್ಟರ ಹೆಚ್ಚುವರಿ ತರಬೇತಿಯನ್ನು ನೀಡಲಾಗುತ್ತದೆ.
ಸಂಸ್ಥೆಯಲ್ಲಿ ಅಸೆಂಬ್ಲಿ ಫಿಟ್ಟರ ತರಬೇತಿಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಟ್ರಸ್ಟಿಗಳಾದ ಪ್ರಸಾದ ಆರ್.ದೇಶಪಾಂಡೆಯವರು ತರಬೇತಿ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡುತ್ತಾ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ಅಸೆಂಬ್ಲಿ ಫಿಟ್ಟರ ತರಬೇತಿಯನ್ನು ಆರಂಭಿಸಿದ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳು ಈ ಹೆಚ್ಚುವರಿ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ತಿಳಿಸಿದರು. ಜೊತೆಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ತರಲು ಕಾರಣರಾದ ಟೊಯೊಟಾ ಪ್ರತಿನಿಧಿಗಳನ್ನು ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರನ್ನು ಅಭಿನಂಧಿಸಿದರು.
ಕಾರ್ಯಕ್ರಮದಲ್ಲಿ ಟೊಯೋಟಾ ಕಿಲ್ಕೋಸ್ಕರ ಮೋಟರ್ಸನ ಅಧಿಕಾರಿಯಾದ ಶ್ರೀ ಸಿದ್ಧಲಿಂಗೇಶ್ವರ ಶೆಟ್ಟರ, ಉಪಸ್ಥೆತರಿದ್ದು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆಡಳಿತಾಧಿಕಾರಿ ಪ್ರಕಾಶ ಪ್ರಭು, ಸಿಬಿಡಿ ಆರ್ ಸೆಟಿಯ ಹಿರಿಯ ಸಲಹೆಗಾರರಾದ ಆನಂತಯ್ಯ ಆಚಾರ ಮತ್ತು ಇತರರು ಉಪಸ್ಥಿತರಿದ್ದರು. ಪ್ರಾಚಾರ್ಯರ ದಿನೇಶ ಆರ್ ನಾಯ್ಕ ಎಲ್ಲರನ್ನು ಸ್ವಾಗತಿಸಿದರು ಮತ್ತು ಸುಕುಮಾರ ಉಪಾಧ್ಯೆ ವಂದಿಸಿದರು.