ಹೊನ್ನಾವರ: ತಾಲೂಕಿನ ಬಣಸಾಲೆಯ ಉಸ್ಮಾನಿಯಾ ಸ್ಟ್ರೀಟ್‌ನ ಮನೆಯೊಂದರ ಹಿಂಬಾಗದ ಕಂಪೌಂಡ್‌ನ ಒಳಗಡೆ ಕಸಾಯಿ ಖಾನೆಗೆ ರವಾನಿಸುವ ನಿಟ್ಟಿನಲ್ಲಿ ಕಟ್ಟಿ ಹಾಕಲಾಗಿದ್ದ 7 ಎತ್ತುಗಳನ್ನು ರಕ್ಷಿಸಿ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬಣಸಾಲೆಯ ಉಸ್ಮಾನಿಯಾ ಸ್ಟ್ರೀಟ್‌ನ ನಿವಾಸಿ ಸಾಹದತ್ ಸಾವುಡಾ ಅಶ್ರಫ್ ಸಾವುಡಾ ಬಂಧಿತ ಆರೋಪಿಯಾಗಿದ್ದಾನೆ. ಈತನು ತನ್ನ ಮನೆಯ ಕಂಪೌಂಡ್ ಒಳಗೆ 60 ಸಾವಿರ ರೂ. ಮೌಲ್ಯದ ಒಟ್ಟೂ 7 ಎತ್ತುಗಳನ್ನು ಹಿಂಸಾತ್ಮಕವಾಗಿ ತೆಂಗಿನ ಮರಕ್ಕೆ ಕಟ್ಟಿ ಹಾಕಿದ್ದು, ಕಸಾಯಿಖಾನೆಗೆ ಸಾಗಾಟ ಮಾಡಲು ಅಥವಾ ಕಡಿದು ಮಾರಾಟ ಮಾಡುವ ಉದ್ದೇಶದಿಂದ ಈ 7 ಎತ್ತುಗಳನ್ನು ಕೂಡಿಟ್ಟಿದ್ದ ಎಂಬ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಮಂಕಿ ಪಿಎಸ್‌ಐ ಭರತಕುಮಾರ ವಿ. ತಂಡ ಆರೋಪಿಯನ್ನು ಬಂಧಿಸಿ, 7 ಎತ್ತುಗಳನನ್ನು ರಕ್ಷಿಸಿದ್ದಾರೆ.
ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.